December 19, 2025

ಸುಳ್ಯ ನಿವಾಸಿ, ಮಡಿಕೇರಿಯಲ್ಲಿ ಎಸೈ ಆಗಿದ್ದ ಚಿನ್ನಪ್ಪ ನಾಯ್ಕ ಹೃದಯಾಘಾತಕ್ಕೆ ಬಲಿ

0
IMG-20211216-WA0022.jpg

ಮಡಿಕೇರಿ: ಇಲ್ಲಿ ಎಸ್.ಐ. ಆಗಿದ್ದ ಚಿನ್ನಪ್ಪ ನಾಯ್ಕ ಹೃದಯಾಘಾತಕ್ಕೆ ಒಳಗಾಗಿ ಮೃತಪಟ್ಟಿರುವ ಘಟನೆ ನಡೆದಿದೆ.

ಚಿನ್ನಪ್ಪ ನಾಯ್ಕ ಸುಳ್ಯ ತಾಲೂಕು ನಡುಗಲ್ಲು ನಿವಾಸಿಯಾಗಿದ್ದಾರೆ. ಚಿನ್ನಪ್ಪ ನಾಯ್ಕ ರಜೆ ಹಿನ್ನೆಲೆಯಲ್ಲಿ ಮನೆಯಲ್ಲಿದ್ದರು. ಈ ಸಂದರ್ಭದಲ್ಲಿ ಅಸ್ವಸ್ಥಗೊಂಡಿದ್ದಾರೆ. ತಕ್ಷಣ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ದಾರಿ ಮಧ್ಯದಲ್ಲಿ ಕೊನೆಯುಸಿರೆಳೆದಿದ್ದಾರೆ ಎಂದು ವರದಿಯಾಗಿದೆ.

ಚಿನ್ನಪ್ಪ ನಾಯ್ಕ ನವೆಂಬರ್ ತಿಂಗಳಿನಲ್ಲಿ ಎಸ್.ಐ.ಆಗಿ ಭಡ್ತಿಗೊಂಡಿದ್ದರು. ಮುಂದಿನ ತಿಂಗಳು ನಿವೃತ್ತಿ ಹೊಂದಲಿದ್ದರು.

Leave a Reply

Your email address will not be published. Required fields are marked *

You may have missed

error: Content is protected !!