ಇತಿಹಾಸ ಪ್ರಸಿದ್ಧ ಕಾರಿಂಜೇಶ್ವರ ದೇವಾಲಯಕ್ಕೆ ಜಿಲ್ಲಾಧಿಕಾರಿ ಭೇಟಿ ನೀಡಿ, ಗಣಿಗಾರಿಕೆ ಬಗ್ಗೆ ಪರಿಶೀಲನೆ
ಬಂಟ್ವಾಳ: ಇತಿಹಾಸ ಪ್ರಸಿದ್ಧ ಕಾರಿಂಜೇಶ್ವರ ದೇವಾಲಯಕ್ಕೆ ಜಿಲ್ಲಾಧಿಕಾರಿ ಡಾ! ರಾಜೇಂದ್ರ ಕೆ.ವಿ. ಎ.ಸಿ.ಮದನ್ ಮೋಹನ್, ತಹಶೀಲ್ದಾರ್ ರಶ್ಮಿ. ಎಸ್.ಆರ್. ಹಾಗೂ ಗಣಿ ಇಲಾಖಾ ಅಧಿಕಾರಿಗಳು ಬೇಟಿ ನೀಡಿ ಪರಿಶೀಲನೆ ನಡೆಸಿದರು.


ಬರಿಮಾರು ಎಂಬಲ್ಲಿ ಜಮಿನು ತಕರಾರಿಗೆ ಜಿಲ್ಲಾಧಿಕಾರಿ ಕೋರ್ಟ್ ಸಂಬಂಧಿಸಿದ ವ್ಯಾಜ್ಯವೊಂದಕ್ಕೆ ತೆರಳಿ ಸ್ಥಳ ತನಿಖೆ ನಡೆಸಿ ನಂತರ ಜಿಲ್ಲಾಧಿಕಾರಿ ಕಾವಳಪಡೂರು ಗ್ರಾಮದ ಕಾರಿಂಜ ದೇವಾಲಯ ಕ್ಕೆ ಬೇಟಿ ನೀಡಿದ್ದಾರೆ.
ಕಾರಿಂಜ ದೇವಾಲಯದ ಸಮೀಪ ನಡೆಯುವ ಗಣಿಗಾರಿಕೆಯ ಸಂಪೂರ್ಣ ಮಾಹಿತಿ ಪಡೆದ ಅವರು ಪರಿಶೀಲನೆ ನಡೆಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗಣಿ ಅಧಿಕಾರಿಗಳಾದ ನಿರಂಜನ್ ಮಹದೇಶ್ವರ ಇದ್ದರು.





