ಕಾಸರಗೋಡು: ಹಂದಿ ಸಾಕಣೆ ತ್ಯಾಜ್ಯದ ಗುಂಡಿಗೆ ಬಿದ್ದು ನೇಪಾಳದ ಕಾರ್ಮಿಕ ಮೃತ್ಯು

ಕಾಸರಗೋಡು: ಹಂದಿ ಸಾಕಣೆ ತ್ಯಾಜ್ಯದ ಗುಂಡಿಗೆ ಬಿದ್ದು ನೇಪಾಳದ ಕಾರ್ಮಿಕನೊಬ್ಬ ಮೃತಪಟ್ಟ ದಾರುಣ ಘಟನೆ ಕಾಸರಗೋಡು ನಗರದ ಹೊರವಲಯದ ಚೌಕಿ ಪೈಚ್ಚಲ್ ಎಂಬಲ್ಲಿ ಶುಕ್ರವಾರ ಸಂಜೆ ನಡೆದಿದೆ.
ಮೃತರನ್ನು ಮಹೇಶ್(19) ಎಂದು ಗುರುತಿಸಲಾಗಿದೆ. ಅಗ್ನಿಶಾಮಕ ಮತ್ತು ರಕ್ಷಣಾ ಸಿಬ್ಬಂದಿ, ಪೊಲೀಸರೊಂದಿಗೆ ಸ್ಥಳಕ್ಕೆ ಧಾವಿಸಿ ಮೃತ ಮಹೇಶ್‌ನನ್ನು ತ್ಯಾಜ್ಯದ ಗುಂಡಿಯಿಂದ ಹೊರತೆಗೆದರೂ ರಕ್ಷಿಸಲು ಸಾಧ್ಯವಾಗಲಿಲ್ಲ.