ಮೂಲ್ಕಿ: ಅತ್ಯಾಚಾರ, ಕೊಲೆ, ದರೋಡೆ ಆರೋಪಿಯ ಬಂಧನ

ಮೂಲ್ಕಿ: ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಬೆಂಗಳೂರಿನ ಚಿಕ್ಕಬಳ್ಳಾಪುರ ನಿವಾಸಿ ಮೌಜಾಮ್ ಅವರನ್ನು ಆ. 25ರಂದು ಸಿಗರೇಟ್ ವಿಷಯದಲ್ಲಿ ಜಗಳ ಮಾಡಿ ಮೂಲ್ಕಿ ಸಮೀಪದಲ್ಲಿ ಕುತ್ತಿಗೆ ಹಿಸುಕಿ ಕೊಂದು ಮೊಬೈಲ್, ಬ್ಯಾಗ್ ಮತ್ತು ನಗದಿನೊಂದಿಗೆ ಪರಾರಿಯಾಗಿದ್ದ ಹರಿಯಾಣ ಮೂಲದ ಆರೋಪಿ ರಾಹುಲ್ ಯಾನೆ ಬೋಲ್ ಕರ್ಮವೀರ್ ಈಶ್ವರ್ ಜಾಟ್ ವಿರುದ್ಧ ಹಲವು ರಾಜ್ಯಗಳಲ್ಲಿ ಗಂಭೀರ ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಈತ ವಿವಿಧ ಪ್ರಕರಣಗಳಲ್ಲಿ ಗುಜರಾತ್, ಕರ್ನಾಟಕ, ಮುಂಬಯಿ, ತೆಲಂಗಾಣ, ಹರಿಯಾಣ ಮುಂತಾದ ರಾಜ್ಯಗಳ ಪೊಲೀಸರಿಗೆ ಬೇಕಾದ ವನಾಗಿದ್ದಾನೆ. ಈತ ಅತ್ಯಾಚಾರ, ಕೊಲೆ ರೈಲು ಪ್ರಯಾಣಿಕರ ದರೋಡೆಯನ್ನು ಮುಂತಾದವು ಗಳನ್ನು ಸರಣಿಯಂತೆ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.