March 18, 2026

ವೇಣೂರು: ಸ್ನಾನಕ್ಕೆ ತೆರಳಿದ ಮೂವರು ವಿದ್ಯಾರ್ಥಿಗಳು ಮೃತ್ಯು

0
IMG-20241127-WA0002.jpg

ವೇಣೂರು: ಸ್ನಾನಕ್ಕೆ ತೆರಳಿದ ಮೂವರು ವಿದ್ಯಾರ್ಥಿಗಳು ಸಾವನ್ನಪ್ಪಿದ ಘಟನೆ ನ. 27ರಂದು ಸಂಜೆ ವೇಣೂರು ಬರ್ಕಜೆ ಎರುಗುಂಡಿ ದೆತ್ತರ ನದಿಯಲ್ಲಿ ಸಂಭವಿಸಿದೆ.

ಘಟನೆಯಲ್ಲಿ ಮೂವರ ಮೃತದೇಹ ಪತ್ತೆಯಾಗಿದೆ. ಮಡಂತ್ಯಾರು ಪರಿಸರದ ಸೂರಜ್, ವಗ್ಗ ನಿವಾಸಿ ಜೋಯಿಸನ್, ಎಡಪದವು ಮೂಲದ ಲಾರೆನ್ಸ್ ಎಂದು ತಿಳಿದು ಬಂದಿದೆ.

ವೇಣೂರು ಪ್ರದೇಶದಲ್ಲಿ ಚರ್ಚಿನ ಸಾಂತ್ ಮಾರಿ ಹಬ್ಬವಿದ್ದ ಕಾರಣ ನಡ್ತಿಕಲ್ಲು ವಾಲ್ಟರ್ ಮೊಂತೇರು ಅವರ ಮನೆಗೆ ನೆಂಟರಾಗಿ ಬಂದಿದ್ದರು. ಹಬ್ಬ ಆಚರಿಸುತ್ತ ಮೂವರು ಜೊತೆಯಾಗಿ ಪಕ್ಕದಲ್ಲಿರುವ ಬರ್ಕಜೆ ನದಿಗೆ ಸ್ನಾನಕ್ಕೆ ತೆರಳಿದ ವೇಳೆ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ. ಘಟನಾ ಸುದ್ದಿ ತಿಳಿಯುತ್ತಿದ್ದಂತೆ ಊರಿನವರು, ಸಂಭಂದಿಕರು ನೂರಾರು ಸಂಖ್ಯೆಯಲ್ಲಿ ಆಗಮಿಸಿದ್ದರು. ವೇಣೂರು ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!