March 18, 2026

SDPI ರಾಜ್ಯ ಪ್ರತಿನಿಧಿಗಳ ಸಭೆ ನೂತನ ಪದಾಧಿಕಾರಿಗಳ ಆಯ್ಕೆ: SDPI ರಾಜ್ಯಾಧ್ಯಕ್ಷರಾಗಿ ಅಬ್ದುಲ್ ಮಜೀದ್ ಮೈಸೂರು

0
image_editor_output_image760589682-1732692089041.jpg

ಮೈಸೂರು: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಕರ್ನಾಟಕ ಇದರ ವತಿಯಿಂದ ಮೈಸೂರಿನಲ್ಲಿ ನಡೆದ ಎರಡು ದಿನಗಳ ರಾಜ್ಯ ಪ್ರತಿನಿಧಿ ಸಭೆಯಲ್ಲಿ 2024-27 ಸಾಲಿನ ನೂತನ ಸಮಿತಿ ಮತ್ತು ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ಈ ವೇಳೆ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮಜೀದ್ ಫೈಝಿ ನೂತನ ರಾಜ್ಯ ಸಮಿತಿಯನ್ನು ಮತ್ತು ಮುಹಮ್ಮದ್ ಅಶ್ರಫ್ ಅವರು ನೂತನ ಪದಾಧಿಕಾರಿಗಳನ್ನು ಘೋಷಿಸಿದರು.

ರಾಜ್ಯಾಧ್ಯಕ್ಷರಾಗಿ ಅಬ್ದುಲ್ ಮಜೀದ್ ಮೈಸೂರು, ಉಪಾಧ್ಯಕ್ಷರಾಗಿ ಅಬ್ದುಲ್ ಹನ್ನಾನ್, ದೇವನೂರ ಪುಟ್ಟನಂಜಯ್ಯ, ಶಾಹಿದಾ ತನ್ನೀಮ್, ರಾಜ್ಯ ಪ್ರಧಾನ ಕಾರ್ಯದರ್ಶಿಗಳಾಗಿ ಮುಜಾಹಿದ್ ಪಾಷ, ಇಬ್ರಾಹಿಂ ಮಜೀದ್ ತುಂಬೆ, BR ಭಾಸ್ಕರ್ ಪ್ರಸಾದ್, ಅಪ್ಪರ್ ಕೊಡ್ಲಿಪೇಟೆ, ರಾಜ್ಯ ಕಾರ್ಯದರ್ಶಿಗಳಾಗಿ ಅನ್ಸರ್ KR ನಗರ, ಅಂಗಡಿ ಚಂದ್ರು, ಮೌಲಾನ ಅಕ್ರಮ್, ರಂಜಾನ್‌ ಕಡಿವಾಳ್‌, ರಿಯಾಝ್ ಕಡಂಬು ಮತ್ತು ರಾಜ್ಯ ಕೋಶಾಧಿಕಾರಿಯಾಗಿ ಅಮ್ಮದ್ ಖಾನ್ ಮೈಸೂರು ಆಯ್ಕೆಯಾಗಿದ್ದಾರೆ.

ಮತ್ತು ಇತರ 17 ಮಂದಿಯನ್ನು ರಾಜ್ಯ ಸಮಿತಿ ಸದಸ್ಯರಾಗಿ ಆಯ್ಕೆ ಮಾಡಲಾಗಿದೆ.

ರಾಜ್ಯ ಸಮಿತಿ ಘೋಷಣೆಯ ನಂತರ ರಾಷ್ಟ್ರೀಯ ಪ್ರತಿನಿಧಿ ಸಭೆಗೆ ಭಾಗವಹಿಸಬೇಕಾದ 11 ಮಂದಿ ಕೌನ್ಸಿಲರ್ ಗಳನ್ನು ರಾಷ್ಟ್ರೀಯ ಕಾರ್ಯದರ್ಶಿ ರಿಯಾಝ್ ಪರಂಗಿಪೇಟೆ ಘೋಷಣೆ ಮಾಡಿದರು.

Leave a Reply

Your email address will not be published. Required fields are marked *

error: Content is protected !!