March 18, 2026

ವಿಟ್ಲ ಲಯನ್ಸ್ ಕ್ಲಬ್ ನೇತೃತ್ವದಲ್ಲಿ ಮೆಗಾ ಉಚಿತ ವೈದ್ಯಕೀಯ ಶಿಬಿರ-ದಂತ ತಪಾಸಣಾ ಶಿಬಿರ

0
image_editor_output_image1045193879-1732640128029

ವಿಟ್ಲ: ಲಯನ್ಸ್ ಕ್ಲಬ್ ವಿಟ್ಲ ಹಾಗೂ ಲಿಯೋ ಕ್ಲಬ್‌ ವಿಟ್ಲ, ಎನ್ ಎಸ್ ಎಸ್ ಘಟಕ ವಿಠಲ ಪದವಿ ಪೂರ್ವ ಕಾಲೇಜು ವಿಟ್ಲ, ಯೆನೆಪೋಯ ಮೆಡಿಕಲ್ ಕಾಲೇಜು ಹಾಗೂ ಆಸ್ಪತ್ರೆ ದೇರಳಕಟ್ಟೆ, ಸಾರ್ವಜನಿಕ ಆರೋಗ್ಯ ದಂತ ವೈದ್ಯಕೀಯ ವಿಭಾಗ ಮತ್ತು ಯೆನೆಪೋಯ ದಂತ ಮಹಾವಿದ್ಯಾಲಯ ದೇರಳಕಟ್ಟೆ ಇದರ ನೇತೃತ್ವದಲ್ಲಿ, ವಿಟ್ಲ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ವಿಠಲ ಎಜುಕೇಶನ್ ಸೊಸೈಟಿ ಸಹಯೋಗದೊಂದಿಗೆ ಮೆಗಾ ಉಚಿತ ವೈದ್ಯಕೀಯ ಮತ್ತು ದಂತ ತಪಾಸಣೆ ಹಾಗೂ ಚಿಕಿತ್ಸಾ ಶಿಬಿರ ವಿಠಲ ಪದವಿ ಪೂರ್ವ ಕಾಲೇಜಿನಲ್ಲಿ ನಡೆಯಿತು.

ಈ ಕಾರ್ಯಕ್ರಮವನ್ನು ವಿಟ್ಲ ಲಯನ್ಸ್ ಅಧ್ಯಕ್ಷರಾದ ರಜಿತ್ ಆಳ್ವ ಇವರ ಅಧ್ಯಕ್ಷತೆಯಲ್ಲಿ ಲಯನ್ಸ್ ಜಿಲ್ಲಾ ಗವರ್ನರ್ ಬಿ.ಎಂ. ಭಾರತಿ ರವರು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು.

ಮುಖ್ಯ ಅತಿಥಿಯಾಗಿ ವಿಟ್ಲ ಪಟ್ಟಣ ಪಂಚಾಯತ್ ಅಧ್ಯಕ್ಷರಾದ ಕರುಣಾಕರ ನಾಯ್ತೋಟ್ಟು, ಲಯನ್ಸ್ ಜಿಲ್ಲಾ ಸಂಪುಟ ಕಾರ್ಯದರ್ಶಿ ಗೀತಾ ರಾವ್, ವಿಟ್ಲ ಸಮುದಾಯ ಅರೋಗ್ಯ ಕೇಂದ್ರದ ವೈದ್ಯಧಿಕಾರಿ ವೇದಾವತಿ ಬಿ, ಜಿಲ್ಲಾ ಮಾಜಿ ಗವರ್ನರ್ ಡಾಕ್ಟರ್ ಗೀತಾಪ್ರಕಾಶ್, ಯೇನೆಪೋಯ ಆಸ್ಪತ್ರೆಯ ದಂತ ವೈದಾಧಿಕಾರಿ ಡಾಕ್ಟರ್ ಅಪೂರ್ವ, ವಲಯಾಧ್ಯಕ್ಷರಾದ ಸುದೇಶ್ ಭಂಡಾರಿ, ವಿಟ್ಲ ಲಯನ್ಸ್ ಕಾರ್ಯದರ್ಶಿ ಅರವಿಂದ್ ರೈ, ಕೋಶಾಧಿಕಾರಿ ಮನೋಜ್ ರೈ, ನಿಕಟಪೂರ್ವ ಅಧ್ಯಕ್ಷೆ ಜಲಜಾಕ್ಷಿ ಬಿ, ಡಾಕ್ಟರ್ ಗಾಯತ್ರಿ ಪ್ರಕಾಶ್, ಲಿಯೋ ಅಧ್ಯಕ್ಷ ಲಿಯೋ ಮೋನಿಶ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ನಮ್ಮೊಂದಿಗೆ ಲಯನ್ ಸದಸ್ಯರಾದ ಕಲಂದರ್, ದೇವಿಪ್ರಸಾದ್ ಶೆಟ್ಟಿ, ಪ್ರಭಾಕರ್ ಆಚಾರ್ಯ, ಮೋನಪ್ಪ ಗೌಡ, ಬಾಲಕೃಷ್ಣ ಗೌಡ, ಅಂಥೋನಿ ಲೋಬೊ, ಲಕ್ಷ್ಮಣ್ ಮಾಸ್ಟರ್, ಜಯ ವಿ ರೈ, ವಿಮಲಾ ಶೆಟ್ಟಿ, ಪುಷ್ಪಲತಾ, ರಶ್ಮಿ ಆಳ್ವ ಲಿಯೋ ರಿಷಿಕ್ ಆಳ್ವ ಮತ್ತು ವಿಠಲ ಪದವಿ ಪೂರ್ವ ಕಾಲೇಜಿನ ಏನ್.ಎಸ್ .ಎಸ್ ನ ವಿದ್ಯಾರ್ಥಿಗಳು ಸಹಕರಿದರು.

ಈ ಕಾರ್ಯಕ್ರಮದ ಮುಖ್ಯ ಸಂಯೋಜಕರಾದ ಜಿಲ್ಲಾ ಹೆಲ್ತ್ ಕ್ಯಾಂಪ್ (ದಂತ ವಿಭಾಗ) ನ ಸಂಯೋಜಕರು ಅದ ಲಯನ್ ಡಾಕ್ಟರ್ ಇರ್ಮಾಡಿ ಶರತ್ ಚಂದ್ರ ಶೆಟ್ಟಿಯವರು ಕಾರ್ಯಕ್ರಮ ನಿರ್ವಹಿಸಿದರು.

Leave a Reply

Your email address will not be published. Required fields are marked *

error: Content is protected !!