March 19, 2026

ಬಂಟ್ವಾಳ ಪುರಸಭೆಯ 2 ನೇ ವಾರ್ಡ್ ಉಪಚುನಾವಣೆ: ಕಾಂಗ್ರೆಸ್ ಅಭ್ಯರ್ಥಿಗೆ ಗೆಲುವು

0
image_editor_output_image-945014076-1732600664679.jpg

ಬಂಟ್ವಾಳ: ಬಂಟ್ವಾಳ ಪುರಸಭೆಯ 2 ನೇ ವಾರ್ಡ್ ನ ಒಂದು ಸದಸ್ಯ ಸ್ಥಾನಕ್ಕೆ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪುರುಷೋತ್ತಮ ಪೂಜಾರಿ ಅವರು ಗೆಲುವು ಸಾಧಿಸಿದ್ದಾರೆ.

ಅ ಮೂಲಕ ಕಾಂಗ್ರೆಸ್ ತನ್ನ ಸ್ಥಾನವನ್ನು ಉಳಿಸಿಕೊಂಡಿದೆ. ಬಿಜೆಪಿಯ ಅಭ್ಯರ್ಥಿ ಇಂದ್ರೇಶ್ ಪೂಜಾರಿ ಅವರಿಗೆ ಸೋಲಾಗಿದೆ. ಇಬ್ಬರು ರಾಜಕೀಯವಾಗಿ ಹೊಸಮುಖಗಳಾಗಿದ್ದು, ಕಾಂಗ್ರೆಸ್ ಅಭ್ಯರ್ಥಿ ಅವರು ವಿಜಯಿಯಾಗಿದ್ದಾರೆ.

ಕಳೆದ ಲೋಕಸಭಾ ಚುನಾವಣಾ ಸಂದರ್ಭದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗಂಗಾಧರ ಪೂಜಾರಿ ಅವರು ಪಕ್ಷತೊರೆದು ಬಿಜೆಪಿಗೆ ಸೇರ್ಪಡೆಗೊಂಡಿದ್ದರು. ಇವರ ತೆರವಾದ ಸ್ಥಾನಕ್ಕೆ ನ.23 ರಂದು ‌ಶನಿವಾರ ಉಪಚುನಾವಣೆ ನಡೆದಿತ್ತು.

Leave a Reply

Your email address will not be published. Required fields are marked *

error: Content is protected !!