ತಾಲೂಕಿನ ಕೆಲವೆಡೆಗಳಲ್ಲಿ ಗಾಂಜಾ ಮಾರಾಟ: ನಾಲ್ವರು ಆರೋಪಿಗಳ ಬಂಧನ
ತುಮಕೂರು: ಕೊರಟಗೆರೆ ಪಟ್ಟಣ ಸೇರಿದಂತೆ ತುಮಕೂರು ತಾಲೂಕಿನ ಕೆಲವೆಡೆಗಳಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ನಾಲ್ವರು ಆರೋಪಿಗಳನ್ನು ಕೊರಟಗೆರೆ ಪೊಲೀಸರು ಬಂಧಿಸಿದ್ದಾರೆ.
ತುಮಕೂರು ಕ್ಯಾತಸಂದ್ರ ನಿವಾಸಿ ಚೇತನ್, ಗೋಕುಲ ಬಡಾವಣೆಯ ನಾಗರಾಜು, ಊರುಕೆರೆಯ ಪ್ರೀತಂ, ಊರುಕೆರೆ ಚೆಕ್‌ಪೋಸ್ಟ್ ಬಳಿಯ ಸಿಂಗಾವೇಲು ಬಂಧಿತ ಆರೋಪಿಗಳು. ಬಂಧಿತರು ಬೇರೆಡೆಯಿಂದ ಗಾಂಜಾವನ್ನು ಪ್ಯಾಕೆಟ್‌ಗಳಲ್ಲಿ ತಂದು ಪಟ್ಟಣ ಸೇರಿದಂತೆ ಕೆಲವು ಕಡೆಗಳಲ್ಲಿ ಮಾರಾಟ ಮಾಡುತ್ತಿದ್ದರು.




