March 21, 2026

500 ರೂ. ವಾಪಸ್ ಕೇಳಿದ್ದಕ್ಕೆ ಯುವಕನಿಗೆ ಚೂರಿ ಇರಿದ ಸ್ನೇಹಿತರು: ಆರೋಪಿಗಳ ಬಂಧನ

0
image_editor_output_image262289985-1731874122187.jpg

ಹುಬ್ಬಳ್ಳಿ: ಕೊಟ್ಟ ಹಣ ವಾಪಸ್ ಕೇಳಿದ್ದಕ್ಕೆ ಯುವಕನೊಬ್ಬನಿಗೆ ಸ್ನೇಹಿತರೇ ಚಾಕುವಿನಿಂದ ಇರಿದ ಘಟನೆ ಆನಂದ ನಗರದಲ್ಲಿ ಶನಿವಾರ ರಾತ್ರಿ ನಡೆದಿದೆ.

ಮೊಹಮ್ಮದ್ ಅಲಿ ಮೊರಬ ಎಂಬಾತ ಚಾಕು ಇರಿತಕ್ಕೊಳಗಾದ ಯುವಕ. ಜಮೀರ್ ಎಂಬಾತ ಮೊಹಮದ್ನಿಂದ 500 ರೂ. ಪಡೆದಿದ್ದ. ಅದನ್ನು ಕೊಡುವ ನೆಪದಲ್ಲಿ ಶನಿವಾರ ರಾತ್ರಿ ಹಳೇ ಹುಬ್ಬಳ್ಳಿ ರೆಹಮತ್ ನಗರದ ವಾಲಿಬಾಲ್ ಗ್ರೌಂಡ್‌ಗೆ ಕರೆಸಿಕೊಂಡಿದ್ದ.

ಆಗ ಮಹ್ಮದ್ ಮತ್ತು ಜಮೀರ್ ನಡುವೆ ಗಲಾಟೆಯಾಗಿದೆ. ಜಮೀರ್ ಜತೆಗಿದ್ದ ಸಾಧಿಕ್, ಅಲ್ತಾಫ್, ಇರ್ಫಾನ್, ಅಸ್ಲಾಂ ಕೂಡಿಕೊಂಡು ಮಹ್ಮದ್‌ನನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದಾರೆ. ಅಸ್ಲಾಂ ಚಾಕುವಿನಿಂದ ಮೊಹಮದ್ ಬೆನ್ನು, ಎದೆಗೆ ಇರಿದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!