ತಿರುವನಂತಪುರಂ: ಆಂಬ್ಯುಲೆನ್ಸ್ ಗೆ ದಾರಿ ಬಿಡದ ಕಾರಿನ ಚಾಲಕನಿಗೆ ಭಾರೀ ದಂಡ: ಕೇರಳದಲ್ಲೊಂದು ವಿಡಿಯೋ ವೈರಲ್
ತಿರುವನಂತಪುರಂ: ಆ್ಯಂಬುಲೆನ್ಸ್ ಸೇವೆಗೆ ಅಡ್ಡಿಪಡಿಸಿದ ವಿಡಿಯೋ ವೈರಲ್ ಆಗಿದ್ದು, ತುರ್ತಾಗಿ ತೆರಳುತ್ತಿದ್ದ ಆ್ಯಂಬುಲೆನ್ಸ್ ವಾಹನಕ್ಕೆ ಕಾರು ಮಾಲೀಕ ದಾರಿ ಬಿಡಲೇ ಇಲ್ಲ. ರೋಗಿಯನ್ನು ತುರ್ತಾಗಿ ಆಸ್ಪತ್ರೆ ದಾಖಲಿಸಬೇಕಿದ್ದ ಕಾರಣ ಆ್ಯಂಬುಲೆನ್ಸ್ ಸೈರನ್ ಹಾಕುತ್ತಲೇ ಸಾಗಿತ್ತು. ಬಹುತೇಕ ಎಲ್ಲಾ ವಾಹನಗಳು ದಾರಿ ಬಿಟ್ಟುಕೊಟ್ಟಿತ್ತು. ಆದರೆ ಮಾರುತಿ ಸಿಯಾಝ್ ಕಾರಿನಲ್ಲಿ ತೆರಳುತ್ತಿದ್ದ ವ್ಯಕ್ತಿ ಮಾತ್ರ ಉದ್ದೇಶಪೂರ್ವಕವಾಗಿ ದಾರಿ ಬಿಟ್ಟಿಲ್ಲ.
ಆ್ಯಂಬುಲೆನ್ಸ್‌ಗಿಂತ ಫಾಸ್ಟ್ ಡ್ರೈವಿಂಗ್ ಮಾಡಿದ್ದೇನೆ ಅನ್ನೋ ಜಂಭದಿಂದ ಮನೆ ಸೇರಿಕೊಂಡ ಕಾರು ಮಾಲೀಕನಿಗೆ ಆಘಾತ ಎದುರಾಗಿದೆ. ಈತ ಇನ್ನು ಯಾವುದೇ ವಾಹನ ಒಡಿಸಲು ಸಾಧ್ಯವಿಲ್ಲ.
ಈ ವಿಡಿಯೋ ಪ್ರಕಾರ ಆ್ಯಂಬುಲೆನ್ಸ್‌ಗೆ ದಾರಿ ಬಿಡದ ಕಾರು ಮಾಲೀಕನ ನಡೆಯನ್ನು ವಿಡಿಯೋ ಮಾಡಲಾಗಿದೆ. ಆ್ಯಂಬುಲೆನ್ಸ್ ಮುಂಭಾಗದಲ್ಲಿ ಕುಳಿತ ಸಹಾಯಕ ಸಿಬ್ಬಂದಿ ವಿಡಿಯೋ ರೆಕಾರ್ಡ್ ಮಾಡಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದಂತೆ ಪೊಲೀಸರು ತಕ್ಷಣವೇ ಕ್ರಮ ಕೈಗೊಂಡಿದ್ದಾರೆ. ಮಾಲೀಕನ ಪತ್ತೆ ಹಚ್ಚಿ ನೇರವಾಗಿ ಮನೆಗೆ ತೆರಳಿದ ಪೊಲೀಸರು ಬರೋಬ್ಬರಿ 2 ಲಕ್ಷ ರೂಪಾಯಿ ದಂಡ ವಿಧಿಸಿದ್ದಾರೆ. ಜೊತೆಗೆ ಈತನ ಡ್ರೈವಿಂಗ್ ಲೈಸೆನ್ಸ್ ರದ್ದು ಮಾಡಿದ್ದಾರೆ ಎಂದು ಈ ವಿಡಿಯೋ ಮಾಹಿತಿ ನೀಡುತ್ತಿದೆ. ಆದರೆ ಈ ವಿಡಿಯೋ ಕುರಿತು ಸ್ಪಷ್ಟ ಮಾಹಿತಿ, ಅಧಿಕೃತ ಪ್ರಕಟಣೆಗಳು ಲಭ್ಯವಿಲ್ಲ.