ಉಪ್ಪಿನಂಗಡಿ: ಲಾಠಿ ಚಾರ್ಜ್ ಸಂದರ್ಭ ಪೊಲೀಸರ ಮೇಲೆ ಹಲ್ಲೆ ಪ್ರಕರಣ:
10 ಮಂದಿ ಆರೋಪಿಗಳ ಬಂಧನ
ಉಪ್ಪಿನಂಗಡಿ: ಪೊಲೀಸ್ ಲಾಠಿ ಚಾರ್ಚ್ ಸಂದರ್ಭದಲ್ಲಿ ಕಲ್ಲು ತೂರಾಟ, ಪೊಲೀಸರ ಮೇಲೆ ಹಲ್ಲೆ, ಕೊಲೆಯತ್ನ, ಸರಕಾರಿ ಸೊತ್ತಿಗೆ ಹಾನಿ, ಸಾರ್ವಜನಿಕ ಶಾಂತಿಭಂಗ ಸೇರಿದಂತೆ ಇನ್ನಿತರ ಕೃತ್ಯಗಳಿಗೆ ಸಂಬಂಧಿಸಿ 10 ಮಂದಿಯನ್ನು ಪೊಲೀಸರು ಬಂಧಿಸಿದ್ದು, ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ತಿಳಿದು ಬಂದಿದೆ.
1.ಮೊಹಮ್ಮದ್ ತಾಹೀರ್ 2.ಸ್ವಾಧಿಕ್ 3.ಅಬ್ದುಲ್ ಮುಬಾರಕ್ 4.ಅಬ್ದುಲ್ ಶರೀನ್ 5.ಮೊಹಮ್ಮದ್ ಜಾಹಿರ್ 6.ಸುಜೀರ್ ಮಹಮ್ಮದ್ ಫೈಜಲ್ 7.ಮೊಹಮ್ಮದ್ ಹನೀಫ್ 8.ಎನ್ ಕಾಸಿಂ 9.ಮೊಹಮ್ಮದ್ ಆಸಿಫ್ 10.ತುಪೈಲ್ ಮಹಮ್ಮದ್ ಬಂಧಿತ ಆರೋಪಿಗಳು.
ಡಿ.14 ರಂದು ಉಪ್ಪಿನಂಗಡಿಯಲ್ಲಿ ನಡೆದ ಘಟನೆಗಳಿಗೆ ಸಂಬಂಧಿಸಿ ಸೆಕ್ಷನ್ 143, 147,151, 341, 353, 269, 270. 354,427, 269, 270, 184, 332, 504, 307ಐಪಿಸಿ ಸೆಕ್ಷನ್‌ನಡಿ ಪೊಲೀಸರು ಮೂರು ಪ್ರಕರಣಗಳನ್ನು ದಾಖಲಿಸಿಕೊಂಡಿದ್ದರು.
ಈ ಕೃತ್ಯಕ್ಕೆ ಸಂಬಂಧಿಸಿದಂತೆ 10 ಮಂದಿಯನ್ನು ಪೊಲೀಸರು ಬಂಧಿಸಿದ್ದು, ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಬಂಧಿತರಲ್ಲಿ ಇಬ್ಬರು ಉಪ್ಪಿನಂಗಡಿ ಪರಿಸರದವರಾದರೆ, ಇನ್ನುಳಿದವರು ಬೇರೆ ಬೇರೆ ಕಡೆಯಿಂದ ಬಂದವರು ಎಂದು ಪೊಲೀಸರು ತಿಳಿಸಿದ್ದಾರೆ.





