December 19, 2025

ವಿದ್ಯಾರ್ಥಿನಿ ಜತೆ ಅನ್ಯಕೋಮಿನ ಯುವಕ ಮಾತನಾಡಿದ ವಿಚಾರ:
ವಿದ್ಯಾರ್ಥಿಗಳ ನಡುವೆ ಮಾರಾಮಾರಿ

0
image_editor_output_image-808656759-1639653214373

ಕಾಪು: ಇತ್ತೀಚೆಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿದ್ಯಾರ್ಥಿಗಳ ನಡುವಿನ ಹೊಡೆದಾಟ ಸಂಸ್ಕೃತಿ ಉಡುಪಿ ಜಿಲ್ಲೆಗೂ ಹಬ್ಬಿದೆ. ಕಾಪುವಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಎರಡು ಗುಂಪಿನ ವಿದ್ಯಾರ್ಥಿಗಳ ನಡುವೆ ಹೊಡೆದಾಟ ನಡೆದಿದೆ.

ಹುಡುಗಿಯೊಬ್ಬಳ ಜೊತೆ ಅನ್ಯ ಕೋಮಿನ ಹುಡುಗ ಮಾತನಾಡಿದ ವಿಚಾರಕ್ಕೆ ಸಂಬಂಧಿಸಿ ಈ ಹೊಡೆದಾಟ ನಡೆದಿದೆ. ಕೆಲ ಹೊತ್ತು ವಿದ್ಯಾರ್ಥಿ ಗಳ ಗುಂಪಿನ ನಡುವೆ ವಾಗ್ವಾದ ಮತ್ತು ಹೊಡೆದಾಟ ನಡೆದ ಬಳಿಕ ಪೊಲೀಸರಿಗೆ ಸುದ್ದಿ ಮುಟ್ಟಿಸಲಾಯಿತು. ತಕ್ಷಣ ಸ್ಥಳಕ್ಕೆ ಬಂದ ಪೊಲೀಸರು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುತ್ತೇವೆ. ಈ ಬಗ್ಗೆ ಸಭೆ ನಡೆಸಿ ಪ್ರಾಂಶುಪಾಲರೊಂದಿಗೂ ಮಾತನಾಡುತ್ತೇವೆ ಎಂದು ಭರವಸೆ ನೀಡಿದರು.

Leave a Reply

Your email address will not be published. Required fields are marked *

You may have missed

error: Content is protected !!