March 27, 2026

ಊಟ ಬೇಕೆಂದು ಅಳುತ್ತಿದ್ದ ಮಗನನ್ನು ಹಲ್ಲೆ ನಡೆಸಿ ಹತ್ಯೆ: ಪತಿ ವಿರುದ್ಧ ಪತ್ನಿ ದೂರು

0
image_editor_output_image-136795943-1731139972991.jpg

ಚಿತ್ರದುರ್ಗ: ಊಟ ಬೇಕೆಂದು ಅಳುತ್ತಿದ್ದ ಮಗನ ಮೇಲೆ ಹಲ್ಲೆ ನಡೆಸಿ ಹತ್ಯೆ ಮಾಡಿದ್ದಾರೆಂದು ಪತಿ ವಿರುದ್ಧ ಪತ್ನಿ ದೂರು ದಾಖಲಿಸಿರುವ ಘಟನೆ ಚಿತ್ರದುರ್ಗ ತಾಲೂಕಿನ ಹಳೇ ರಂಗಾಪುರ ಗ್ರಾಮದಲ್ಲಿ ನಡೆದಿದೆ.

ಮಂಜುನಾಥ (06) ಮೃತ ದುರ್ದೈವಿ ಬಾಲಕ. ಮಂಜುನಾಥ ಊಟ ಬೇಕೆಂದು ಅಳುತ್ತಿದ್ದ. ಅದಕ್ಕಾಗಿ ತಾಯಿ ಪಕ್ಕದ ಮನೆಗೆ ಊಟ ತರಲು ಹೋಗಿದ್ದಳು. ಹಿಂತಿರುಗಿ ಬರುವಷ್ಟರಲ್ಲಿ ತಂದೆ ತಿಪ್ಪೇಶ್ ಮಗನ ಮೇಲೆ ಹಲ್ಲೆ ನಡೆಸಿದ್ದಾನೆ. ಬೆನ್ನು, ಪಕ್ಕೆಗೆ ಹೊಡೆದಿದ್ದು, ಮಗ ಮೂರ್ಛೆ ಹೋಗಿದ್ದಾನೆ. ತಾಯಿ ತಕ್ಷಣ ಮಗನನ್ನು ಚಿತ್ರದುರ್ಗದ ಖಾಸಗಿ ಆಸ್ಪತ್ರೆಗೆ ಕರೆತಂದರು. ಅಷ್ಟರಲ್ಲಿ ಬಾಲಕ ಸಾವನ್ನಪ್ಪಿದ್ದಾನೆ.

Leave a Reply

Your email address will not be published. Required fields are marked *

error: Content is protected !!