ಮಂಗಳೂರು: ಬಂಗುಡೆ ಮೀನೀನ ದರ ಭಾರೀ ಇಳಿಕೆ
ಮಂಗಳೂರು: ಬಂಗುಡೆ ಪ್ರಿಯರಿಗೆ ಶುಭಸುದ್ದಿ. ತಿಂಗಳ ಹಿಂದೆ ಕಿಲೋಗೆ 200-250 ರೂ. ದರವಿದ್ದ ಬಂಗುಡೆ ಮೀನು ಈಗ ಬಹಳಷ್ಟು ಅಗ್ಗ ವಾಗಿದ್ದು, 100-150 ರೂ.ಗಳಲ್ಲಿ ದೊರೆಯುತ್ತಿದೆ.
ಕೆಲವು ದಿನಗಳ ಹಿಂದೆ ಮಂಗಳೂರಿನ ಕೇಂದ್ರ ಮೀನು ಮಾರುಕಟ್ಟೆಯಲ್ಲಿ 80 ರೂ.ಗೆ ಮಾರಾಟ ಆಗಿರುವುದೂ ಇದೆ! ವಿದೇಶಗಳಲ್ಲಿ ಬಂಗುಡೆ ಮೀನಿಗೆ ಬೇಡಿಕೆ ಕಡಿಮೆಯಾಗಿ ಸ್ಥಳೀಯ ಮಾರುಕಟ್ಟೆಗೆ ಹೆಚ್ಚು ಪ್ರಮಾಣದಲ್ಲಿ ಪೂರೈಕೆ ಆಗುತ್ತಿರುವುದು ಇದಕ್ಕೆ ಮುಖ್ಯ ಕಾರಣ ಎಂದು ತಿಳಿದುಬಂದಿದೆ.
ಮೀನುಪ್ರಿಯರ ನೆಚ್ಚಿನ ಬಂಗುಡೆ ಮೀನು ಪ್ರಸ್ತುತ ಮಾರುಕಟ್ಟೆಯಲ್ಲಿ ಬಹಳ ಕಡಿಮೆ ದರಕ್ಕೆ ಲಭ್ಯವಾಗುತ್ತಿದೆ. ಹೆದ್ದಾರಿ ಬದಿ ಅಲ್ಲಲ್ಲಿ ವ್ಯಾಪಾರಿಗಳು ಬಂಗುಡೆಯನ್ನೇ ಮಾರಾಟ ಮಾಡು ತ್ತಿರುವ ದೃಶ್ಯಗಳು ಕಂಡುಬರುತ್ತಿವೆ.