ಹೆಣ್ಣು ಮಕ್ಕಳ ವಿವಾಹ ವಯಸ್ಸಿನ ಮಿತಿಯನ್ನು 18 ವರ್ಷದಿಂದ 21 ವರ್ಷಕ್ಕೆ ಏರಿಕೆ: ಕೇಂದ್ರ ಸಚಿವ ಸಂಪುಟ
ದಿಲ್ಲಿ: ಭಾರತೀಯ ಹೆಣ್ಣು ಮಕ್ಕಳ ವಿವಾಹ ವಯಸ್ಸಿನ ಮಿತಿಯನ್ನು 18 ವರ್ಷದಿಂದ 21 ವರ್ಷಕ್ಕೆ ಏರಿಕೆ ಮಾಡುವ ಪ್ರಸ್ತಾಪಕ್ಕೆ ಕೇಂದ್ರ ಸಚಿವ ಸಂಪುಟ ಬುಧವಾರ (ಡಿಸೆಂಬರ್ 15) ಅಂಕಿತ ಹಾಕಿರುವುದಾಗಿ ಮೂಲಗಳು ತಿಳಿಸಿವೆ
ಪ್ರಸ್ತುತ ದೇಶದಲ್ಲಿ ವಿವಾಹವಾಗುವ ಕನಿಷ್ಠ ವಯಸ್ಸು ಗಂಡಿಗೆ 21 ವರ್ಷ, ಹೆಣ್ಣಿಗೆ 18 ವರ್ಷ ಎಂದು ನಿಗದಿಯಾಗಿತ್ತು. ಆದರೆ ಬಾಲ್ಯ ವಿವಾಹ ನಿಗ್ರಹಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಹೆಣ್ಣುಮಕ್ಕಳ ವಿವಾಹ ವಯೋ ಮಿತಿಯನ್ನು 18ರಿಂದ 21ಕ್ಕೆ ಏರಿಕೆ ಮಾಡಿದೆ.





