December 19, 2025

ಉಪ್ಪಿನಂಗಡಿ: ಲಾಠಿ ಚಾರ್ಜ್ ಪ್ರಕರಣ: 10 ಮಂದಿ ಪಿ ಎಫ್ ಐ ಕಾರ್ಯಕರ್ತರ ವಿರುದ್ಧ ಪೊಲೀಸರ ಕೊಲೆಯತ್ನ, ಮಾನಭಂಗ ಯತ್ನ ಪ್ರಕರಣ

0
IMG-20211214-WA0070

ಉಪ್ಪಿನಂಗಡಿ: ಉಪ್ಪಿನಂಗಡಿಯಲ್ಲಿ ಠಾಣೆ ಮುಂಭಾಗ ನಡೆದ ಪ್ರತಿಭಟನೆಯ ವೇಳೆ 10 ಮಂದಿ ಪಿಎಫೈ ಕಾರ್ಯಕರ್ತರು ಇಬ್ಬರು ಮಹಿಳಾ ಪೊಲೀಸರ ಮೇಲೆ ಹಲ್ಲೆ ನಡೆಸಿ ಸಮವಸ್ತ್ರ ಹರಿದು ಮಾನಭಂಗಕ್ಕೆ ಯತ್ನಿಸಿ ಕೊಲೆ ಬೆದರಿಕೆ ಒಡ್ಡಿದ್ದಾರೆ ಎಂದು ಉಪ್ಪಿನಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೊಹಮ್ಮದ್ ತಾಹೀರ್, ಸ್ನಾಧಿಕ್, ಅಬ್ದುಲ್ ಮುಬಾರಕ್, ಅಬುಲ್ ಶರೀನ್, ಮೊಹಮ್ಮದ್ ಜಾಹಿರ್, ಸುಜೀರ್ ಮಹಮ್ಮದ್‌ ಪೈಜಲ್, ಮೊಹಮ್ಮದ್ ಹನೀಫ್, ಎನ್ ಕಾಸಿಂ, ಮೊಹಮ್ಮದ್ ಆಸಿಫ್ ಹಾಗೂ ತುಪೈಲ್ ಮಹಮ್ಮದ್ ಕೆ ಕೃತ್ಯ ಎಸಗಿದ ಆರೋಪಿಗಳು ಎಂದು ದೂರಿನಲ್ಲಿ ಹೆಸರಿಸಲಾಗಿದೆ.

ಆರೋಪಿಗಳ ವಿರುದ್ಐದ ಪಿಸಿ ಕಲಂ 1860 (U/s-143,147,151,341,354,332,353,427,307,269,270,149) ಹಾಗೂ ಕರ್ನಾಟಕ ಆಸ್ತಿ ಹಾನಿ ತಡೆ ಮತ್ತು ನಷ್ಟ ಕಾಯ್ದೆ 1981(KARNATAKA PREVENTION OF DISTRUCTION & LOSS OF PROPERTY ACT 1981) (U/s-2(A)) ರಂತೆ ಪ್ರಕರಣ ದಾಖಲಾಗಿದೆ.

ಈ ಆರೋಪಿಗಳು ಉಪ್ಪಿನಂಗಡಿಯ ಠಾಣೆಯ ಮುಂಭಾಗ ಅಕ್ರಮ ಕೂಟ ರಚಿಸಿ ಠಾಣೆಗೆ ಕಲ್ಲು ಬಿಸಾಡಿ ಠಾಣೆಯ ಮುಂಭಾಗದ ಗಾಜುಗಳನ್ನು ಪುಡಿ ಮಾಡಿದ್ದಾರೆ ಹಾಗೂ ಠಾಣೆ ಎದುರು ನಿಲ್ಲಿಸಿದ ಇಲಾಖಾ ವಾಹನಗಳನ್ನು ಜಖಂಗೊಳಿಸಿ ಹಾನಿಗೊಳಿಸಿ ಸರ್ಕಾರಿ ಸೊತ್ತುಗಳಿಗೆ ನಷ್ಟವುಂಟು ಮಾಡಿದ್ದಾರೆಂದು ಉಪ್ಪಿನಂಗಡಿ ಪಿಎಸೈ ಓಮನ ಎನ್ ಕೆ ರವರು ನೀಡಿದ ದೂರಿನಲ್ಲಿ ತಿಳಿಸಿದ್ದಾರೆ

ತಲವಾರ್ ದಾಳಿ ಪ್ರಕರಣದಲ್ಲಿ ಈ ಇಬ್ಬರನ್ನು ವಿಚಾರಣೆಗೆ ಕರೆದುಕೊಂಡು ಬಂದಿರುವುದನ್ನು ವಿರೋಧಿಸಿ ಡಿ.14 ರಂದು ಬೆಳಿಗ್ಗೆ ಸುಮಾರು 10 ಗಂಟೆ ಸುಮಾರಿಗೆ ಪಿಎಫ್‌ ಐ ಕಾರ್ಯಕರ್ತರು ಠಾಣೆಯ ಮುಂಭಾಗ ಸೇರಿ ಮುಖಂಡರುಗಳನ್ನು ಬಿಡುಗಡೆ ಮಾಡುವಂತೆ ಅಗ್ರಹಿಸಿದ್ದರು.

Leave a Reply

Your email address will not be published. Required fields are marked *

You may have missed

error: Content is protected !!