December 19, 2025

ಮಥುರಾದ ಶ್ರೀಕೃಷ್ಣ ಜನ್ಮಭೂಮಿಯನ್ನು ಹಿಂದೂಗಳಿಗೆ ಮರಳಿ ನೀಡಬೇಕು: ಮೋಹನ್ ಭಾಗವತ್

0
image_editor_output_image507275117-1639631382578.jpg

ಲಖನೌ: ಹಿಂದೂ ಧರ್ಮದಿಂದ ಅನ್ಯ ಧರ್ಮಗಳಿಗೆ ಮತಾಂತರ ಆಗಿರುವವರನ್ನು ಪುನಃ ಹಿಂದೂ ಧರ್ಮಕ್ಕೆ ಕರೆತರಲು (ಘರ್ ವಾಪಸಿ) ಹಿಂದೂಗಳು ಪ್ರತಿಜ್ಞೆ ಮಾಡಬೇಕು ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್‌) ಸರಸಂಘಚಾಲಕ ಮೋಹನ್‌ ಭಾಗವತ್‌ ಕರೆ ನೀಡಿದರು.

ಮಥುರಾದ ಶ್ರೀಕೃಷ್ಣ ಜನ್ಮಭೂಮಿಯನ್ನು ಹಿಂದೂಗಳಿಗೆ ಮರಳಿ ನೀಡಬೇಕು ಎಂದು ಆಗ್ರಹಿಸಿದ ರಾಮಭದ್ರಾಚಾರ್ಯರು, ‘ನಾವು ಈಗಾಗಲೇ ಎ (ಅಯೋಧ್ಯೆ) ಮತ್ತು ಕೆ (ಕಾಶಿ) ಹೊಂದಿದ್ದೇವೆ. ಈಗ ನಮಗೆ ಎಂ (ಮಥುರಾ) ಬೇಕು’ ಎಂದು ಅವರು ಹೇಳಿದರು

ಚಿತ್ರಕೂಟದಲ್ಲಿ ನಡೆಯುತ್ತಿರುವ ‘ಹಿಂದೂ ಮಹಾಕುಂಭ’ದಲ್ಲಿ ಅವರು ಬುಧವಾರ ಮಾತನಾಡಿದರು. ಮಹಾಕುಂಭದಲ್ಲಿ ಪಾಲ್ಗೊಂಡಿರುವ ಸ್ವಾಮೀಜಿಗಳು ಮತ್ತು ದಾರ್ಶನಿಕರು ‘ಲವ್‌ ಜಿಹಾದ್‌, ಮತಾಂತರ’ಕ್ಕೆ ಸಂಬಂಧಿಸಿದಂತೆ ಕಳವಳ ವ್ಯಕ್ತಪಡಿಸಿ, ಹಿಂದೂ ಸಂಸ್ಕೃತಿ ಮತ್ತು ಸಂಪ್ರದಾಯವನ್ನು ರಕ್ಷಿಸುವಂತೆ ಅವರು ಆಗ್ರಹಿಸಿದರು.

ಸ್ವಾಮೀಜಿಗಳನ್ನು ಉದ್ದೇಶಿಸಿ ಮಾತನಾಡಿದ ಭಾಗವತ್‌, ಹಿಂದೂಗಳಲ್ಲಿ ಏಕತೆ ತರಬೇಕಾದ ಅಗತ್ಯವಿದ್ದು, ಜಾತೀಯತೆ ಮತ್ತು ಇತರ ಸಾಮಾಜಿಕ ಪಿಡುಗುಗಳನ್ನು ಹೋಗಲಾಡಿಸಬೇಕಾದ ಅಗತ್ಯವಿದೆ ಎಂದು ಪ್ರತಿಪಾದಿಸಿದರು.

‘ಮತಾಂತರ ಆಗಿರುವವರನ್ನು ಮರಳಿ ಹಿಂದೂ ಧರ್ಮಕ್ಕೆ ಕರೆತರಲು ಎಲ್ಲರೂ ಪ್ರತಿಜ್ಞೆ ಮಾಡಬೇಕಿದೆ. ಜತೆಗೆ ಹಿಂದೂಗಳು ಮತಾಂತರ ಆಗದಂತೆಯೂ ನೋಡಿಕೊಳ್ಳಬೇಕಿದೆ. ಹಿಂದೂ ಸಹೋದರಿಯರ ಘನತೆಯನ್ನು ಕಾಪಾಡುವ ಪ್ರತಿಜ್ಞೆಯನ್ನು ನಾವೆಲ್ಲರೂ ಮಾಡಬೇಕಿದೆ’ ಎಂದರು.

Leave a Reply

Your email address will not be published. Required fields are marked *

You may have missed

error: Content is protected !!