December 15, 2025

ಅಬುದಾಬಿಯಲ್ಲಿ ಮೃತಪಟ್ಟ ತುಮಕೂರಿನ ವ್ಯಕ್ತಿ: ದಫನ ಮಾಡದೇ  ಶವಾಗಾರದಲ್ಲಿ ಇದ್ದ ಮೃತದೇಹವನ್ನು ದಫನ ಮಾಡಿದ ಎಸ್ ಕೆ ಎಸ್ ಎಸ್ ಎಫ್ ಅಬುಧಾಬಿ ಕರ್ನಾಟಕದ ಸದಸ್ಯರು

0
image_editor_output_image1373834455-1730730264780

ಅಬುಧಾಬಿ: ಯು.ಎ.ಇ.
ದಿನಾಂಕ 28-10-2024 ರಂದು ಅನಿವಾಸಿ ಕನ್ನಡಿಗ ಜನಾಬ್ ರಿಯಾಜ್ ಅಹ್ಮದ್ ತುಮಕೂರು (73) ರವರು ಅಬುಧಾಯಲ್ಲಿ ಯಲ್ಲಿ ಮೃತಪಟ್ಟಿದ್ದು ಮೃತ ದೇಹವು ಕೆಲವು ತಾಂತ್ರಿಕ ಅಡಚಣೆಗಳಿಂದಾಗಿ ಹಲವು ದಿನಗಳಕಾಲ ಶವಗಾರದಲ್ಲಿ ಇದ್ದಂತಹ ಮೃತದೇಹವನ್ನು ಎಸ್ ಕೆ ಎಸ್ ಎಸ್ ಎಫ್ ಅಬುಧಾಬಿ ಕರ್ನಾಟಕದ ಮದ್ಯಸ್ಥಿಕೆಯಿಂದ ಮೃತರ ಕುಟುಂಬಸ್ಥರಾದ ಆರಿಫ್ ಖಾನ್ ಹಾಗೂ ಬಂದು ಮಿತ್ರರ ಸಮ್ಮುಖದಲ್ಲಿ ಅಬುಧಾಬಿ ಬನಿಯಾಸ್ ಕಬರ್ ಸ್ಥಾನದಲ್ಲಿ ಮೃತ ದೇಹವನ್ನು ದಫನ್ ಮಾಡಲಾಯಿತು,

ಒಬ್ಬಂಟಿತನದಿಂದ ಕಷ್ಟದಲ್ಲಿರುವವರ ಅಭಯವಾಗಿ ಮತ್ತೊಮ್ಮೆ ತಮ್ಮ ಕಾರುಣ್ಯ ಹಸ್ತವನ್ನು ಚಾಚಿದ ಎಸ್ ಕೆ ಎಸ್ ಎಸ್ ಎಫ್ ಅಬುಧಾಬಿ ಕರ್ನಾಟಕ ಈ ಮೂಲಕ ಬಂದು ಬಳಗ ವಿಲ್ಲದ ಅನಿವಾಸಿಗರಿಗೆ ಹೆಗಲಾಗಿ ನಿಲ್ಲಲು ಸದಾ ಸಿದ್ದ ಎಂಬೂದನ್ನು ಮತ್ತೊಮ್ಮೆ ಸಾಬಿತು ಪಡಿಸಿದರು,

ಮೃತ ಸಂಸ್ಕಾರ ಕಾರ್ಯಕ್ರಮವು ಎಸ್ ಕೆ ಎಸ್ ಎಸ್ ಎಫ್ ಅಬುಧಾಬಿ ಕರ್ನಾಟಕದ ಅಧ್ಯಕ್ಷರಾದ ಜನಾಬ್ ಸಹೀರ್ ಹುದವಿ ಉಸ್ತಾದರ ನೇತೃತ್ವದಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ಎಸ್ ಕೆ ಎಸ್ ಎಸ್ ಎಫ್ ಅಬುಧಾಬಿ ಕರ್ನಾಟಕದ ನಾಯಕರಾದ ಜನಾಬ್ ಹಸ್ಸನ್ ದಾರಿಮಿ ಉಸ್ತಾದ್, ಜನಾಬ್ ಹನೀಪ್ಹ್ ಅರಿಯಮೂಲೆ, ಹಾಜಿ ಶಾಫಿ ಪೆರುವಾಯಿ, ಜಾಫರ್ ಉಪ್ಪಿನಂಗಡಿ, ಸಫ್ವಾನ್, ತ್ವಾಹ, ಹಿದಾಯತ್ ಮಾರ್ವೇಲ್, ಮುಂತಾದದವರು ಉಪಸ್ಥಿತರಿದ್ದರು

Leave a Reply

Your email address will not be published. Required fields are marked *

error: Content is protected !!