ವಿಟ್ಲ: ಮಹಿಳೆಯರ ಸಿಧ್ದ ಉಡುಪುಗಳ ಮಳಿಗೆ “EVA ವಿಮೆನ್” ಸ್ಥಳಾಂತರಗೊಂಡು ಉದ್ಘಾಟನೆ
ವಿಟ್ಲ: ಮಹಿಳೆಯರ ಉಡುಪುಗಳ ವಿಟ್ಲದ ಪ್ರತಿಷ್ಠಿತ ಮಳಿಗೆ “Eva ವಿಮೆನ್” ವಿಟ್ಲ ಪುತ್ತೂರು ರಸ್ತೆಯ ಸ್ಮಾರ್ಟ್ ಸಿಟಿಯ ಮೊದಲ ಮಹಡಿಯಲ್ಲಿ ಇಂದು ಸ್ಥಳಾಂತರಗೊಂಡು ಉದ್ಘಾಟನೆಗೊಂಡಿತು.
ಶೈಖುನಾ ಮಹಮೂದಲ್ ಫೈಝಿ ವಾಲೆಮುಂಡೋವು ದುವಾ ನೆರವೇರಿಸಿದರು.
ವಿಟ್ಲ ಕೇಂದ್ರ ಜುಮಾ ಮಸೀದಿ ಖತೀಬ್ ದಾವೂದ್ ಹನೀಫಿ, ಅಬೂಸ್ವಾಲಿಹ್ ಖಾಮಿಲ್ ಸಖಾಫಿ, ಟೌನ್ ಮಸೀದಿ ಖತೀಬ್ ಅಬ್ಬಾಸ್ ಮದನಿ ಉಪಸ್ಥಿತರಿದ್ದರು.
ಎಸ್.ಎಲ್.ವಿ ಪುಸ್ತಕ ಸಂಸ್ಥೆಯ ಮಾಲಕ ದಿವಾಕರ್ ದಾಸ್ ನೇರ್ಲಾಜೆ , ವಿಟ್ಲ ಪಟ್ಟಣ ಪಂಚಾಯತ್ ಸದಸ್ಯ ವಿ.ಕೆ.ಎಂ.ಅಶ್ರಫ್ ಹಾಗೂ ಆರ್.ಜೆ.ಜ್ಯುವೆಲ್ಲರ್ಸ್ ಮಾಲಕ ತಾನಾಜ್ ಸೌಹಾರ್ದಯುತವಾಗಿ ಮಳಿಗೆಯನ್ನು ಉದ್ಘಾಟಿಸಿದರು.
ಈ ಸಂದರ್ಭ ವಿಟ್ಲ ವರ್ತಕರ ಸಂಘದ ಅಧ್ಯಕ್ಷ ಬಾಬು ಪ್ರಿಯ, ವಿಟಿವಿ ಯ ರಾಮದಾಸ್ ವಿಟ್ಲ, ಮೊಯ್ದೀನ್ ಶಾಫಿ ಕಂಬಳಬೆಟ್ಟು, ಇಕ್ಬಾಲ್ ಶೀತಲ್, ಟಾಪ್ಕೋ ಜುವೆಲ್ಲರಿ ಮಾಲಕ ಮೊಹಮ್ಮದ್ ಟಿ.ಕೆ, ಹನೀದ್ ಎಂ ಎಚ್ ಕುಡ್ತಮುಗೇರು, ರಝಾಕ್ ನೆಕ್ಕರೆ, ಶಾಕಿರ್ ಅಳಕೆಮಜಲು, ಖಲಂದರ್ ಪರ್ತಿಪಾಡಿ, ಉಬೈದ್ ವಿಟ್ಲ ಬಝಾರ್, ಸೈಫುದ್ದೀನ್, ಅಬ್ಬಾಸ್ ಟಿಎಚ್ಎಂಎ, ಇಸ್ಮಾಯಿಲ್ ಶಾಫಿ ಫಿಟ್ ಫ್ಯಾಷನ್, ಉಮ್ಮರ್ ಕಂಬಳಬೆಟ್ಟು, ಹಮೀದ್ ಕೆ.ಎಸ್, ರಹೀಂ ಕುಂಡಡ್ಕ, ಮಹಮ್ಮದ್ ಅಲಿ ವಿಟ್ಲ, ವಿ.ಕೆ.ಎಂ.ಹಂಝ, ರಫೀಕ್ ಎಂ.ಜಿ.ಆರ್ ಮುಂತಾದವರು ಶುಭ ಹಾರೈಸಿದರು.
ಉದ್ಘಾಟನಾ ಸಮಾರಂಭದ ಪ್ರಯುಕ್ತ ಮಹಿಳೆಯರಿಗೆ ಮೆಹಂದಿ ಸ್ಪರ್ಧೆ ಏರ್ಪಡಿಸಲಾಗಿತ್ತು.
ಈ ಮಳಿಗೆಯಲ್ಲಿ ಮಹಿಳೆಯರ ಎಲ್ಲಾ ವಿಧದ ಆಧುನಿಕ ಮಾದರಿಯ ಸಿದ್ದ ಉಡುಪುಗಳಿದ್ದು, ಆನ್‌ಲೈನ್ ಮೂಲಕ ಖರೀದಿಸುವ ವ್ಯವಸ್ಥೆ ಇದ್ದು, ಮನೆಗೆ ತಲುಪಿಸಲಾಗುವುದು ಎಂದು ಮಾಲಕರಲ್ಲಿ ಓರ್ವರಾದ ತೌಸೀಫ್ ಎಂ.ಜಿ .ಹೇಳಿದರು. ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಸದಸ್ಯ ಅಬೂಬಕರ್ ಅನಿಲಕಟ್ಟೆ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.