November 22, 2024

ರಾಜ್ಯದ ಏಳು ಪೊಲೀಸ್ ಅಧಿಕಾರಿಗಳಿಗೆ ಗೃಹಮಂತ್ರಿ ದಕ್ಷತಾ ಪದಕ

0

ಬೆಂಗಳೂರು: ವಿಶೇಷ ಕಾರ್ಯಾಚರಣೆ, ತನಿಖೆ ಹಾಗೂ ವಿಧಿ ವಿಜ್ಞಾನ ಪ್ರಯೋಗಾಲಯದಲ್ಲಿ (ಎಫ್‌ಎಸ್‌ಎಲ್) ಶ್ಲಾಘನೀಯ ಸೇವೆ ಸಲ್ಲಿಸಿದ ರಾಜ್ಯದ ಏಳು ಪೊಲೀಸ್ ಅಧಿಕಾರಿಗಳಿಗೆ ಕೇಂದ್ರ ಗೃಹ ಸಚಿವಾಲಯ ಕೊಡಮಾಡುವ ಗೃಹಮಂತ್ರಿ ದಕ್ಷತಾ ಪದಕ-2024 ಲಭಿಸಿದೆ.

ಪದಕಕ್ಕೆ ಭಾಜನರಾದ ಅಧಿಕಾರಿಗಳು: ಡಿವೈಎಸ್‌ಪಿ ಕೆ.ಬಸವರಾಜ(ಆಂತರಿಕ ಭದ್ರತಾ ವಿಭಾಗ), ಎಸಿಪಿ ವಿ.ಎಲ್.ರಮೇಶ್ (ಬೆಂಗಳೂರು ನಗರ), ಇನ್‌ಸ್ಪೆಕ್ಟರ್‌ಗಳಾದ ಉಮೇಶ್ ಕಾಂಬ್ಳೆ(ರಾಯಚೂರು), ನರೇಂದ್ರ ಬಾಬು(ಸಿಐಡಿ), ಕೆ.ಎಂ.ವಸಂತ(ಹಾಸನ), ರಮೇಶ್ ಎಚ್‌. ಹೊನ್ನಾಪುರ(ಕಾರವಾರ) ಹಾಗೂ ವಿಧಿವಿಜ್ಞಾನ ಪ್ರಯೋಗಾಲಯದ ಉಪ ನಿರ್ದೇಶಕ ಪ್ರವೀಣ್ ಸಂಗನಾಳ್ ಮಠ ಅವರಿಗೆ ಪದಕ ಲಭಿಸಿದೆ.

ಕ್ಲಿಷ್ಟ ರೀತಿಯ ಅಪರಾಧ ಪ್ರಕರಣಗಳನ್ನು ಭೇದಿಸಿ ಉತ್ತಮ ತನಿಖೆ ನಡೆಸುವ ತನಿಖಾಧಿಕಾರಿಗಳಿಗೆ ಪ್ರತಿವರ್ಷ ಕೇಂದ್ರ ಗೃಹ ಸಚಿವಾಲಯವು ಗೃಹಮಂತ್ರಿ ಹೆಸರಿನಲ್ಲಿ ಈ ಪದಕ ನೀಡುತ್ತದೆ. ಈ ಬಾರಿ ವಿಶೇಷ ಕಾರ್ಯಾಚರಣಾ ವಿಭಾಗದಲ್ಲಿ ವಿವಿಧ ರಾಜ್ಯಗಳ 348 ಪೊಲೀಸ್‌ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ, ತನಿಖಾ ವಿಭಾಗದಲ್ಲಿ 107 ಮಂದಿಗೆ ಹಾಗೂ ಎಫ್‌ಎಸ್ಎಲ್ ವಿಭಾಗದಲ್ಲಿ ಎಂಟು ಮಂದಿಗೆ ಈ ಪದಕ ಲಭಿಸಿದೆ. ಶೀಘ್ರದಲ್ಲೇ ಪದಕ ಪ್ರದಾನ ಮಾಡಲಾಗುವುದು ಎಂದು ಮೂಲಗಳು ತಿಳಿಸಿವೆ.

Leave a Reply

Your email address will not be published. Required fields are marked *

error: Content is protected !!