April 5, 2025

ವಿಟ್ಲ ಜೇಸಿ ಶಾಲೆ :ಸ್ಟೂಡೆಂಟ್ ಲೆಡ್ ಕಾನ್ಫರೆನ್ಸ್

0

ವಿಟ್ಲ: ಜೇಸಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಲೀಡ್ ಪಠ್ಯಕ್ರಮದ ಅಂಗವಾಗಿ ಸ್ಟೂಡೆಂಟ್ ಲೆಡ್ ಕಾನ್ಫರೆನ್ಸ್ ನಡೆಯಿತು.

ವಿದ್ಯಾರ್ಥಿಗಳು ಲೀಡ್ ಪಠ್ಯಕ್ರಮದ ವರ್ಷದ ಕ್ರಿಯಾ ಚಟುವಟಿಕೆಗಳ ಪ್ರದರ್ಶನ ಇದಾಗಿದ್ದು, ಸ್ವ ಕ್ರಿಯಾಶೀಲತೆಯ ಪ್ರತಿಫಲನಗೊಂಡಿತು. ಕಾರ್ಯಕ್ರಮದ ಉದ್ಘಾಟನೆ ಹಾಗೂ ಅಧ್ಯಕ್ಷತೆವಹಿಸಿದ ಶಾಲಾ ಅಧ್ಯಕ್ಷರಾದ ಶ್ರೀಧರ್ ಶೆಟ್ಟಿಯವರು ಮಕ್ಕಳ ಪಠ್ಯಕ್ರಮದ ಸುಪ್ತ ಯೋಚನೆಗಳಿಗೆ ಇದೊಂದು ವೇದಿಕೆಯಾಗಿದೆ, ಸದುಪಯೋಗಪಡಿಸಿಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.

ಲೀಡ್ ಪಠ್ಯಕ್ರಮದ ಸೀನಿಯರ್ ಎಕ್ಸಲೆಂಟ್ ಮ್ಯಾನೇಜರ್ ಮಹಮ್ಮದ್ ನಾಸಿರ್ ಆಧುನಿಕ ಪೈಪೋಟಿಯ ಜಗತ್ತಿನಲ್ಲಿ ವಿಜ್ಞಾನ, ಗಣಿತ ಹಾಗೂ ಆಂಗ್ಲ ಭಾಷೆಯ ಪರಿಣಾಮಕಾರಿ ಭೋದನೆಯಲ್ಲಿ ಶಿಕ್ಷಕರ ಮಾರ್ಗದರ್ಶನಕ್ಕೆ ಹಾಗೂ ವಿದ್ಯಾರ್ಥಿಗಳ ಸೃಜನಶೀಲತೆಯ ಪರೀಕ್ಷೆಗೆ ಇದೊಂದು ವೇದಿಕೆಯಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಶಾಲಾ ಆಡಳಿತ ಮಂಡಳಿಯ ಕಾರ್ಯದರ್ಶಿಗಳಾದ ಮೋಹನ ಎ, ನಿರ್ದೇಶಕರಾದ ಹಸನ್ ವಿಟ್ಲ, ಮೋನಪ್ಪ ಶೆಟ್ಟಿ, ಸಂತೋಷ್ ಶೆಟ್ಟಿ ಪೆಲ್ತಡ್ಕ ಉಪಸ್ಥಿತರಿದ್ದರು. ಪ್ರೇಕ್ಷಕರಾಗಿ ಆಗಮಿಸಿದ ಹೆತ್ತವರು ಮಕ್ಕಳ ಕ್ರಿಯಾಶೀಲತೆಯನ್ನು ಕಂಡು ಸಂತಸಪಟ್ಟರು. ಶಾಲಾ ಪ್ರಾಂಶುಪಾಲ ಜಯರಾಮ ರೈ ಸ್ವಾಗತಿಸುತ್ತ ಶುಭ ಹಾರೈಸಿದರು. ಉಪ ಪ್ರಾಂಶುಪಾಲೆ ಜ್ಯೋತಿ ಶೆಣೈ ವಂದನಾರ್ಪಣೆಗೈದರು.‌ ಹವ್ಯ ಮತ್ತು ಇರಾಮ್ ಫಾತಿಮಾ ಕಾರ್ಯಕ್ರಮ ನಿರೂಪಿಸಿದರು.

 

 

Leave a Reply

Your email address will not be published. Required fields are marked *

error: Content is protected !!