ಅಂತಾರಾಜ್ಯ ಬೈಕ್ ಕಳ್ಳನ ಬಂಧನ: 42 ಬೈಕ್‌ಗಳ ಜಪ್ತಿ ಮಾಡಿದ ಪೊಲೀಸರು
ತುಮಕೂರು: ಅಂತಾರಾಜ್ಯ ಬೈಕ್ ಕಳ್ಳನನ್ನು ಬಂಧಿಸಿದ ಪೊಲೀಸರು, 21.60 ಲಕ್ಷ ರೂ. ಮೌಲ್ಯದ 42 ಬೈಕ್‌ಗಳನ್ನು ಜಪ್ತಿ ಮಾಡಿದ ಘಟನೆ ತುಮಕೂರಿನಲ್ಲಿ ನಡೆದಿದೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ಪಟ್ಟಣದ ಮುಭಾರಕ್ ಖಾನ್ ಅಲಿಯಾಸ್ ಮಟನ್ ಮುಭಾರಕ್ (53) ಬಂಧಿತ ಕಳ್ಳ. ಸೆ. 24ರಂದು ನೆಲಮಂಗಲ ತಾಲೂಕಿನ ಚಿಕ್ಕನಹಳ್ಳಿಯ ಕೆಂಪಗಂಗಯ್ಯ ಎಂಬವರ ಬೈಕ್ ನಗರದ ಎಪಿಎಂಸಿ ಯಾರ್ಡ್‌ನಲ್ಲಿ ಕಳುವಾಗಿತ್ತು. ಮೇಕೆ ಸಂತೆಯಲ್ಲಿ ಮೇಕೆ ಖರೀದಿಸಲು ಬಂದಿದ್ದಾಗ ಬೈಕ್ ಕಾಣೆಯಾಗಿತ್ತು. ಈ ಕುರಿತು ಕ್ಯಾತಸಂದ್ರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.