ಪುತ್ತೂರು: ಸಮೀರ್ ಎಂಬಾತ ನನ್ನ ಜೀವನ ಹಾಳು ಮಾಡಿದ್ದಾನೆ! ದೇವಸ್ಥಾನದ ಕಾಣಿಕೆ ಹುಂಡಿಯಲ್ಲಿ ಹೀಗೊಂದು ಚೀಟಿ ಪತ್ತೆ
ಪುತ್ತೂರು: ಜನ ತಮ್ಮ ಕಷ್ಟಗಳನ್ನು ದೇವರಲ್ಲಿ ಹೇಳಿಕೊಳ್ಳುವುದು ಮಾಮೂಲಿ. ದೇವಸ್ಥಾನಕ್ಕೆ ತೆರಳಿ ದೇವರ ಎದುರು ಕೈ ಮುಗಿದು ನಿಂತು ತಮ್ಮ ಸಂಕಷ್ಟಗಳನ್ನು ಹೇಳಿಕೊಳ್ಳುವುದು ಹಲವು ಮಂದಿಯ ರೂಢಿ, ಆದರೇ ಮಹಿಳೆಯೊಬ್ಬರು ತಮ್ಮ ಕಷ್ಟದ ಬಗ್ಗೆ ಚೀಟಿಯಲ್ಲಿ ಬರೆದು ದೇವರ ಹುಂಡಿ ಹಾಕಿರುವುದು ಬೆಳಕಿಗೆ ಬಂದಿದೆ.
ಈ ಘಟನೆ ನಡೆದಿರುವುದು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ. ದೇವರ ಕಾಣಿಕೆ ಹುಂಡಿಯಲ್ಲಿ ಮಹಿಳೆಯೊಬ್ಬರು ಬರೆದಿದ್ದಾರೆನ್ನಲಾದ ಚೀಟಿವೊಂದು ದೊರಕಿದ್ದು, ಚೀಟಿಯಲ್ಲಿ ತಮಗಾದ ಅನ್ಯಾಯದ ಬರೆದುಕೊಂಡಿದ್ದಾರೆ.
ಚೀಟಿಯಲ್ಲಿ ಏನಿದೆ?
‘ಸಮೀರ್ ಅನ್ನೋವನು ನನ್ನ ಜೀವನ ಹಾಳು ಮಾಡಿದ್ದಾನೆ. ಈವತ್ತು ನಾನು ನನ್ನ ಮಗಳು ಬೀದಿಯಲ್ಲಿ ಇದ್ದಿವಿ. ಅವನ ಜೀವನ ಕೂಡ ಹಾಳು ಆಗಬೇಕು ಅವನಿಗೆ ಮದುವೆ ಆಗಲು ಹುಡುಗಿ ಸಿಗಬಾರದು. ಓ ದೇವರೆ ಇದು ನನ್ನ ಪ್ರಾರ್ಥನೆ’ ಎಂದು ಬರೆಯಲಾಗಿದೆ.
ಈ ಬಗ್ಗೆ ವಿಶ್ವ ಹಿಂದೂ ಪರಿಷದ್ ಬಜರಂಗದಳ, ಮಾತೃಶಕ್ತಿ, ದುರ್ಗಾವಾಹಿನಿ ಪುತ್ತೂರು ಪ್ರತಿಕ್ರಿಯಿಸಿದ್ದು, ಅನ್ಯಾಯ ಆಗಿದ್ದರೆ ಸಂಪರ್ಕಿಸುವಂತೆ ತಿಳಿಸಿದೆ. ಈ ಬಗೆಗಿನ ಸತ್ಯಾಂಶ ಮುಂದಿನ ದಿನಗಳಲ್ಲಿ ತಿಳಿಯಬೇಕಿದೆ.





