May 5, 2026

“ನನ್ನ ಸೀಡಿ ನಿಮ್ಮ ಬಳಿ ಇದ್ದರೆ ರಿಲೀಸ್‌ ಮಾಡಿ”: ಡಿ.ಕೆ.ಶಿವಕುಮಾರ್ ಗೆ ಯೋಗೇಶ್ವರ್ ಪುತ್ರಿ ಸವಾಲು

0
image_editor_output_image1158082598-1730011540942.jpg

ಬೆಂಗಳೂರು: ಸಿ ಪಿ ಯೋಗೇಶ್ವರ್‌ ಬಿಜೆಪಿ ತೊರೆದು ಕಾಂಗ್ರೆಸ್‌ ಸೇರ್ಪಡೆಯಾಗಿದ್ದು, ಕಾಂಗ್ರೆಸ್ ಸೇರ್ಪಡೆ ಹಿಂದೆ ಡಿ ಕೆ ಶಿವಕುಮಾರ್‌ ಸಿಡಿ ರಹಸ್ಯದ ಇದೆ ಎನ್ನುವ ಆರೋಪ ಕೇಳಿ ಬಂದಿದೆ.

ಈ ಕುರಿತು ಚನ್ನಪಟ್ಟಣ ಕಾಂಗ್ರೆಸ್‌ ಅಭ್ಯರ್ಥಿ ಸಿ ಪಿ ಯೋಗೇಶ್ವರ್‌ ಅವರ ಪುತ್ರಿ ನಿಶಾ ಯೋಗೇಶ್ವರ್‌ ಅವರು ಸೋಶಿಯಲ್‌ ಮೀಡಿಯಾದಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ. ಡಿ ಕೆ ಶಿವಕುಮಾರ್‌ ಸರ್‌.. ನನ್ನ ಸಿಡಿ ನಿಮ್ಮ ಬಳಿ ಇದ್ದರೆ ಯಾವುದೇ ಯೋಚನೆ ಮಾಡದೇ ರಿಲೀಸ್‌ ಮಾಡಿ ಎಂದು ಹೇಳಿದ್ದಾರೆ.

ಖಾಸಗಿ ಸುದ್ದಿ ವಾಹಿನಿಯಲ್ಲಿ ಸಿ ಡಿ ವಿಚಾರವಾಗಿ ಪ್ರಸ್ತಾಪವಾಗಿದ್ದು, ಪುತ್ರಿಯ ರಕ್ಷಣೆಗಾಗಿ ಸಿ ಪಿ ಯೋಗೇಶ್ವರ್‌ ಅವರು ಪಕ್ಷಾಂತರದ ನಿರ್ಧಾರ ತೆಗೆದುಕೊಂಡ್ರಾ ಎಂಬ ಬಗ್ಗೆ ಚರ್ಚೆಯಾಗಿದೆ. ಮಗಳ ಸಿಡಿ ಬಳಿಸಿಕೊಂಡು ಡಿ ಕೆ ಶಿವಕುಮಾರ್‌ ಅವರು ಕಾಂಗ್ರೆಸ್‌ ಪಕ್ಷಕ್ಕೆ ಸಿ ಪಿ ಯೋಗೇಶ್ವರ್‌ ಅವರನ್ನ ಕರೆ ತಂದಿದ್ದಾರೆ ಎಂದು ಡಿ ಕೆ ಶಿವಕುಮಾರ್‌ ಮೇಲೆ ಆರೋಪ ಇದೆ ಎಂದು ನಿಶಾ ಯೋಗೇಶ್ವರ್‌ ಅವರು ಹೇಳಿದ್ದಾರೆ.

Leave a Reply

Your email address will not be published. Required fields are marked *

error: Content is protected !!