ಉಡುಪಿ: ಅವಧಿ ಮೀರಿ ಹೊಟೇಲ್‌ಗಳಲ್ಲಿ ಅವ್ಯವಹಾರ: ಬಾರ್ & ರೆಸ್ಟೋರೆಂಟ್ ಲೈಸೆನ್ಸ್ ರದ್ದು
ಉಡುಪಿ: ವಿವಿದೆಡೆ ವೇಶ್ಯಾವಾಟಿಕೆ ಹಾಗೂ ಅವಧಿ ಮೀರಿ ಹೊಟೇಲ್‌ಗಳು ಕಾರ್ಯಾಚರಿಸುತ್ತಿರುವ ಬಗ್ಗೆ ಸಾರ್ವಜನಿಕರಿಂದ ದೂರು ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಉಡುಪಿ ನಗರ ಭಾಗದಲ್ಲಿ ಪೊಲೀಸರು ಆಠೋಬರ್ 24ರ ತಡರಾತ್ರಿ ಕಾರ್ಯಾಚರಣೆ ನಡೆಸಿ ಎಚ್ಚರಿಕೆ ನೀಡಿದ್ದರು.
ಮುಖ್ಯವಾಗಿ ಹಳೆ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣ, ನರ್ಮ್ ಬಸ್ ತಂಗುದಾಣ, ಸಿಟಿ, ಸರ್ವಿಸ್ ಬಸ್ ತಂಗುದಾಣದಲ್ಲಿ ಅನಗತ್ಯವಾಗಿ ಇದ್ದವರನ್ನು ತೆರಳುವಂತೆ ಸೂಚಿಸಲಾಯಿತು. ಜತೆಗೆ ಹೊಟೇಲ್‌ಗಳಿಗೂ ತೆರಳಿ ಎಚ್ಚರಿಕೆ ನೀಡಲಾಗಿತ್ತು.
ನಗರ ಠಾಣೆಯ ಪೊಲೀಸ್ ನಿರೀಕ್ಷಕ ಶ್ರೀಧರ ಸತಾರೆ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆಸಲಾಗಿತ್ತು.
ಮಣಿಪಾಲ ಠಾಣಾ ವ್ಯಾಪ್ತಿಯ ಕಟ್ಟಡ ಸಂಖ್ಯೆ 4-94E4 ರಲ್ಲಿ ನಡೆಸುತ್ತಿರುವ Dee-Tee(ಭವಾನಿ) ಲಾಡ್ಜಿಂಗ್ & ರೆಸ್ಟೋರೆಂಟ್ ಹಾಗೂ ಕಟ್ಟಡ ಸಂಖ್ಯೆ 2-7E, E1, E2, E3, E4, E5ರಲ್ಲಿ ಶಾಂಭವಿ ಅಸೋಸಿಯೇಟ್ಸ್ ನ 7th Heaven(Ecstays), ಎಂಬ ಬಾರ್ & ರೆಸ್ಟೋರೆಂಟ್ ಗಳಲ್ಲಿ ಗ್ರಾಹಕರಿಗೆ ತಡರಾತ್ರಿವರೆಗೆ ಅವಕಾಶ ಮಾಡಿಕೊಟ್ಟಿರುವುದರಿಂದ, ಬಾರ್ ರೆಸ್ಟೋರೆಂಟ್ ನಿರ್ವಹಣೆ ವೇಳೆ ಯಾವುದೇ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳದೆ ಇರುವುದರಿಂದ ಮತ್ತು ಪದೇ ಪದೇ ಅಪರಾಧ ಪ್ರಕರಣಗಳು ನಡೆಯುತ್ತಿರುವುದರಿಂದ, ಕಾನೂನು ಸುವ್ಯವಸ್ಥೆಯ ದೃಷ್ಟಿಯಿಂದ ಉದ್ದಿಮೆಯ ಪರವಾನಿಗೆಯನ್ನು ರದ್ದುಪಡಿಸುವಂತೆ, ಪೊಲೀಸ್ ಅಧೀಕ್ಷಕರಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿತ್ತು.