ಕೆನಡಾದಲ್ಲಿ ಭೀಕರ ಅಪಘಾತ: ಭಾರತೀಯ ಮೂಲದ ನಾಲ್ವರು ಮೃತ್ಯು
ಒಟ್ಟಾವಾ : ಕೆನಡಾದ ಟೊರೊಂಟೊ ಬಳಿ ಡಿವೈಡರ್‌ಗೆ ಟೆಸ್ಲಾ ಕಾರು ಡಿಕ್ಕಿ ಹೊಡೆದು ಬೆಂಕಿ ಹೊತ್ತಿ ಉರಿದ ಪರಿಣಾಮ ನಾಲ್ವರು ಭಾರತೀಯರು ಸಾವಿಗೀಡಾಗಿದ್ದಾರೆ ಎಂದು ವರದಿಯಾಗಿದೆ.
ಮೃತಪಟ್ಟವರನ್ನು ಗುಜರಾತ್‌ನ ಗೋಧ್ರಾ ಮೂಲದ ಕೇತಾ ಗೋಹಿಲ್ (30) ಮತ್ತು ನಿಲ್ ಗೋಹಿಲ್ (26) ಎಂದು ಗುರುತಿಸಲಾಗಿದೆ. ಅಪಘಾತದಲ್ಲಿ ಇಬ್ಬರು ಸ್ನೇಹಿತರು ಸಹ ಮೃತಪಟ್ಟಿದ್ದಾರೆ.
ಕಾರಿನಲಿದ್ದ ಓರ್ವ ಮಹಿಳೆಯನ್ನು ಬೇರೆ ವಾಹನದಲ್ಲಿದ್ದ ಪ್ರಯಾಣಿಕರು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆಕೆ ಪ್ರಾಣಪಾಯದಿಂದ ಪಾರಾಗಿದ್ದಾಳೆ ಎನ್ನಲಾಗಿದೆ