February 4, 2026

ಶಿವಮೊಗ್ಗ: ಲಾರಿಗೆ ಬೈಕ್ ಢಿಕ್ಕಿ, ಇಬ್ಬರು ಮೃತ್ಯು, ಮತ್ತೊರ್ವ ಗಂಭೀರ

0
image_editor_output_image-177819875-1729831931264.jpg

ಶಿವಮೊಗ್ಗ: ಲಾರಿಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಮೃತಪಟ್ಟು, ಮತ್ತೊಬ್ಬರ ಸ್ಥಿತಿ ಗಂಭೀರವಾದ ಘಟನೆ ಮಲವಗೊಪ್ಪ ಎಂಬಲ್ಲಿ ಅ.24ರ ಗುರುವಾರ ರಾತ್ರಿ ಸಂಭವಿಸಿದೆ.

ಈ ಭೀಕರ ಅಪಘಾತದಲ್ಲಿ ಒಂದೇ ಬೈಕ್‌ನಲ್ಲಿದ್ದ ಮೂವರ ಪೈಕಿ ಇಬ್ಬರು ಮೃತಪಟ್ಟಿದ್ದು, ಮೃತರೆಲ್ಲ ವಿದ್ಯಾನಗರದವರು ಎನ್ನಲಾಗಿದೆ.

ಶಿವಮೊಗ್ಗದಿಂದ ತೆರಳುತ್ತಿದ್ದ ಲಾರಿಗೆ ಎದುರಿನಿಂದ ಬಂದ ಬೈಕ್ ಡಿಕ್ಕಿ ಹೊಡೆದಿದೆ. ಬೈಕ್‌‌ ಲಾರಿಗೆ ಡಿಕ್ಕಿ ಹೊಡೆಯುವ ಮುನ್ನ ಮತ್ತೊಂದು ಬೈಕ್‌ಗೆ ಡಿಕ್ಕಿ ಹೊಡೆದು ಆ ನಂತರ ಲಾರಿಗೆ ಗುದ್ದಿದ್ದಾರೆ ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *

error: Content is protected !!