February 4, 2026

ಸುರತ್ಕಲ್: ಅಲೆಗಳ ಹೊಡೆತಕ್ಕೆ ಸಮುದ್ರಪಾಲಾಗಿದ್ದ ಯುವಕನ ಮೃತದೇಹ ಪತ್ತೆ

0
image_editor_output_image394476985-1729835593222.jpg

ಸುರತ್ಕಲ್ : ಅಲೆಗಳ ಹೊಡೆತಕ್ಕೆ ಸಮುದ್ರಪಾಲಾಗಿದ್ದ ಯುವಕನ ಶವ ಸಸಿಹಿತ್ಲು ಕಡಲ ಕಿನಾರೆಯಲ್ಲಿ ಪತ್ತೆಯಾಗಿದೆ. ಬಂಟ್ವಾಳ ತಾಲೂಕಿನ ಬಿಸಿ ರೋಡ್ ನಿವಾಸಿ, 21 ವರ್ಷದ ಪ್ರಜ್ವಲ್ ಮೃತ ಯುವಕ.

ನಿನ್ನೆ ಸುರತ್ಕಲ್‌ ಸಮೀಪದ ಮುಕ್ಕ ರೆಡ್‌ ರಾಕ್‌ ಬಳಿಯ ಕಡಲ ಕಿನಾರೆಗೆ 8 ಜನ ಸ್ನೇಹಿತರು ವಿಹಾರಕ್ಕೆ ಬಂದಿದ್ದರು. ಸಮುದ್ರ ಕಿನಾರೆಯಲ್ಲಿ ಅಲೆಗಳ ಜೊತೆ ಆಟವಾಡುತ್ತಿದ್ದ ವೇಳೆ ಜೋರಾಗಿ ಅಪ್ಪಳಿಸಿದ ಅಲೆಯಲ್ಲಿ ಪ್ರಜ್ವಲ್ ಕೊಚ್ಚಿಕೊಂಡು ಹೋಗಿದ್ದ. ಅಲೆಗಳ ಹೊಡೆತದಿಂದ ತಪ್ಪಿಸಿಕೊಂಡ ಇತರ ಯುವಕರು ತಮ್ಮ ಜೀ*ವ ಉಳಿಸಿಕೊಂಡಿದ್ದರು.

ಈ ಬಗ್ಗೆ ಯುವಕನ ಸಂಬಂಧಿಕರು ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ನಾಪತ್ತೆಯಾದ ಯುವಕನಿಗಾಗಿ ಶೋಧಕಾರ್ಯ ನಡೆಸಲಾಗಿತ್ತು. ಇಂದು ಯುವಕನ ಶ*ವ ಪತ್ತೆಯಾಗಿದೆ.

Leave a Reply

Your email address will not be published. Required fields are marked *

error: Content is protected !!