ಪಾಣೆಮಂಗಳೂರು: ಮೂಲತಃ ವಿಟ್ಲ ನಿವಾಸಿ, ಉದ್ಯಮಿ ಸೂಫಿ ಹಾಜಿ ನಿಧನ
ಬಂಟ್ವಾಳ: ಪಾಣೆಮಂಗಳೂರು ಮೆಲ್ಕಾರ್ ನಿವಾಸಿ ಕೊಹಿನೂರ್ ಕಾಂಪ್ಲೆಕ್ಸ್ ಮೆಲ್ಕಾರ್ ಇದರ ಮಾಲಕರಾದ ಸೂಫಿ ಹಾಜಿ (92 ವರ್ಷ) ಇಂದು ಮಧ್ಯಾಹ್ನ ಸ್ವಗ್ರಹದಲ್ಲಿ ನಿಧನರಾದರು.
ಪಾಣೆಮಂಗಳೂರು ಮೆಲ್ಕಾರ್ ನಿವಾಸಿ ಕೊಹಿನೂರ್ ಕಾಂಪ್ಲೆಕ್ಸ್ ಮೆಲ್ಕಾರ್ ಇದರ ಮಾಲಕರಾದ ಸೂಫಿ ಹಾಜಿ (92 ವರ್ಷ) ಇಂದು ಮಧ್ಯಾಹ್ನ ಸ್ವಗ್ರಹದಲ್ಲಿ ನಿಧನರಾದರು
ಮೂಲತಃ ವಿಟ್ಲ ಒಕ್ಕೆತ್ತೂರು ನಿವಾಸಿಯಾಗಿದ್ದು ಸುಮಾರು 60 ವರ್ಷಗಳ ಹಿಂದೆ ಟ್ಯಾಕ್ಸಿ ಚಾಲಕ ಮಾಲಕರಾಗಿ ಜನಾನುರಾಗಿಯಾಗಿದ್ದ ಇವರು ಬಳಿಕ ಮೆಲ್ಕಾರ್ ನಲ್ಲಿ ಕೊಹಿನೂರ್ ಕಾಂಪ್ಲೆಕ್ಸ್ ನಿರ್ಮಿಸಿ ಉದ್ಯಮಿಯಾಗಿ ಗುರುತಿಸಿಕೊಂಡಿದ್ದರು.
ಮೃತರು 2 ಗಂಡು ಮತ್ತು 2 ಹೆಣ್ಣು ಮಕ್ಕಳನ್ನು ಮತ್ತು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.





