March 21, 2026

ಮನೆಯ ಬಲ್ಬ್ ಸರಿಮಾಡುವಾಗ ವಿದ್ಯುತ್ ಶಾಕ್: ಯುವಕ ಸಾವು

0
image_editor_output_image-1445161004-1729320631687.jpg

ಚಿಕ್ಕಬಳ್ಳಾಪುರ: ವಿದ್ಯುತ್ ಶಾಕ್ ತಗುಲಿ ಯುವಕನೊರ್ವ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಚಿಕ್ಕಬಳ್ಳಾಪುರ ತಾಲೂಕಿನ ಕುರ್ಲಹಳ್ಳಿ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ನರಸಿಂಹಪ್ಪ ಹಾಗೂ ನಾಗಮಣಿ ದಂಪತಿಗಳ ಪುತ್ರ 17 ವರ್ಷದ ಯಶವಂತ್ ಮೃತ ದುರ್ದೈವಿ. ಅಂದಹಾಗೆ ತಂದೆ ತಾಯಿ ಕೂಲಿ ಕೆಲಸ ಮಾಡುವವರಾಗಿದ್ದು, ಹಳೆಯ ಮನೆ ಬಾಡಿಗೆಗೆ ಪಡೆದು ಅಲ್ಲಿಯೇ ಜೀವನ ನಡೆಸುತ್ತಿದ್ದರು.

ಮೃತ ಯಶ್ವಂತ್ ಚಿಕ್ಕಬಳ್ಳಾಪುರ ನಗರದ ಜೂನಿಯರ್ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವ್ಯಾಸಂಗ ಮಾಡ್ತಿದ್ದ. ಇತ್ತೀಚೆಗೆ ಸುರಿದ ಮಳೆಗೆ ಮನೆಯ ಕಲ್ಲು ಚಪ್ಪಡಿಗಳ ಮೇಲ್ಛಾವಣಿಯಿಂದ ನೀರು ಸೋರಿಕೆಯಾಗಿ ಬಲ್ಬ್‌ಗೆ ಉರಿಯುತ್ತಿರಲಿಲ್ಲವಂತೆ. ಇದರಿಂದ ವಿದ್ಯುತ್‌ ಸಂಪರ್ಕ ಸರಿಮಾಡಲು ಯಶವಂತ್ ಕತ್ತರಿಯಿಂದ ವೈರ್ ಕಟ್ ಮಾಡುವಾಗ ಕೆರೆಂಟ್ ಶಾಕ್ ಹೊಡೆದು ಕೆಳಗೆ ಬಿದ್ದಿದ್ದಾನೆ.

Leave a Reply

Your email address will not be published. Required fields are marked *

error: Content is protected !!