March 22, 2026

ಹಾಸ್ಯ ನಟ ಹುಲಿ ಕಾರ್ತಿಕ್ ವಿರುದ್ಧ FIR ದಾಖಲು

0
image_editor_output_image-621135510-1728371018282.jpg

ಬೆಂಗಳೂರು: ಖಾಸಗಿ ಸುದ್ದಿ ವಾಹಿನಿ ಯಲ್ಲಿ ಪ್ರಸಾರವಾಗುತ್ತಿದ್ದ ಜನಪ್ರಿಯ ಹಾಸ್ಯ ಕಾರ್ಯಕ್ರಮ ಗಿಚ್ಚಿ ಗಿಲಿಗಿಲಿ ಮೂರನೇ ಆವೃತ್ತಿಯ ವಿನ್ನರ್ ನಟ ಹುಲಿ ಕಾರ್ತಿಕ್ ಮೇಲೆ FIR ದಾಖಲಾಗಿದೆ.

ಗಿಚ್ಚಿ ಗಿಲಿಗಿಲಿ ಮಾತ್ರವಲ್ಲದೇ ಸಿನಿಮಾಗಳಲ್ಲೂ ನಟಿಸಿ ಸೈ ಎನ್ನಿಸಿಕೊಂಡಿರುವ ಹುಲಿ ಕಾರ್ತಿಕ್ ಅವರು ಕೆಲ ದಿನಗಳ ಹಿಂದಷ್ಟೇ ಪ್ರಸಾರವಾದ ಖಾಸಗಿ ಸುದ್ದಿ ವಾಹಿನಿಯ ಅವಾರ್ಡ್ ಕಾರ್ಯಕ್ರಮ ಒಂದರಲ್ಲಿ ಮಾತನಾಡುವ ವೇಳೆ ಭೋವಿ ಜನಾಂಗಕ್ಕೆ ನೋವುಂಟು ಮಾಡುವ ಹೇಳಿಕೆ ನೀಡಿದ್ದು, ಘಟನೆ ಸಂಬಂಧ ಲೋಕೇಶ್ ಎಂಬುವವರು ಅನ್ನಪೂರ್ಣೇಶ್ವರಿ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!