ಮಂಗಳೂರು: ಗುರುಪುರ ಸೇತುವೆಯಿಂದ ನದಿಗೆ ಹಾರಿದ ಯುವಕ
ಮಂಗಳೂರು: ವ್ಯಕ್ತಿಯೊಬ್ಬರು ಗುರುಪುರ ಸೇತುವೆಯಿಂದ ಫಲ್ಗುಣಿ ನದಿಗೆ ಹಾರಿದ್ದು ಈ ಬಗ್ಗೆ ಬಜ್ಪೆ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.
ಬಡಗ ಎಡಪದವು ಚಟ್ಟೆಪಾದೆಯ ದಡ್ಡಿ ರೋಡ್‌ನ ರಮೇಶ್ ಕುಲಾಲ್ (48) ಶನಿವಾರ ರಾತ್ರಿ 8ಕ್ಕೆ ಬಸ್ಸಿನಲ್ಲಿ ಗುರುಪುರ ಸೇತುವೆ ಬಳಿ ಆಗಮಿಸಿ ಸೇತುವೆ ಮೇಲೆ ಮೊಬೈಲ್ ಮತ್ತು ಚಪ್ಪಲಿಯನ್ನಿಟ್ಟು ನದಿಗೆ ಹಾರಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ.
ಎಸ್‌ಡಿಆರ್‌ಎಫ್ ಮತ್ತು ಪೊಲೀಸರು ನಾಪತ್ತೆಯಾದ ವ್ಯಕ್ತಿಗಾಗಿ ಹುಡುಕಾಟ ಮುಂದುವರಿಸಿದ್ದಾರೆ. ರಮೇಶ್ ಶನಿವಾರ ರಾತ್ರಿಯಿಂದ ನಾಪತ್ತೆಯಾಗಿದ್ದಾರೆ ಎಂದು ಅವರ ಪತ್ನಿ ಬಜ್ಪೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ರಮೇಶ್ ಮಂಗಳೂರಿನ ಇನ್‌ಲ್ಯಾಂಡ್ ಕಂಪೆನಿಯಲ್ಲಿ ಜೆಸಿಬಿ ಚಾಲಕನಾಗಿ ಕೆಲಸ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ. ರಮೇಶ್‌ಗಾಗಿ ಫಲ್ಗುಣಿ ನದಿಯಲ್ಲಿ ಕಾರ್ಯಾಚರಣೆ ಮುಂದುವರಿದಿದೆ.