ವಿಟ್ಲ: ನೀರಕ್ಕಣಿ ಸಿರಾಜುಲ್ ಹುದಾ ಮದರಸದಲ್ಲಿ ಮೀಲಾದುನ್ನೆಬಿ
ವಿಟ್ಲ; ನೀರಕ್ಕಣಿ ಸಿರಾಜುಲ್ ಹುದಾ ಮದರಸ ವಿದ್ಯಾರ್ಥಿಗಳ ಈದ್ ಮಿಲಾದ್ ಕಾರ್ಯಕ್ರಮವು ಮದರಸ ಅಧ್ಯಕ್ಷ ಇಸ್ಮಾಯಿಲ್ ಮುಸ್ಲಿಯಾರ್ ಸೇರಾಜೆ ಅಧ್ಯಕ್ಷತೆಯಲ್ಲಿ ನಡೆಯಿತು.
ಈ ಸಂದರ್ಭ ಮದರಸ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಸದರ್ ಉಸ್ತಾದ್ ಅಬ್ದುಲ್ ಹಮೀದ್ ಮುಸ್ಲಿಯಾರ್ ಉದ್ಘಾಟಿಸಿದರು.
ಮುಖ್ಯ ಅತಿಥಿಗಳಾಗಿ ಬಂಟ್ವಾಳ ತಾಲೂಕು ಜಮೀಯ್ಯತುಲ್ ಫಲಾಹ್ ಅಧ್ಯಕ್ಷ ರಶೀದ್ ವಿಟ್ಲ, ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಸದಸ್ಯ ಅಬೂಬಕರ್ ಅನಿಲಕಟ್ಟೆ, ವಿಟ್ಲ ಟೌನ್ ಮಸೀದಿ ಜೊತೆ ಕಾರ್ಯದರ್ಶಿ ಇಸ್ಮಾಯಿಲ್ ಹಾಜಿ ಅಡ್ಡದಬೀದಿ, ವಿಟ್ಲ ಪಂಚಾಯತ್ ಮಾಜಿ ಸದಸ್ಯ ಸೇಕಾಲಿ ಸೇರಾಜೆ, ಇಸ್ಮಾಯಿಲ್ ಹಾಜಿ ನೀರಕ್ಕಣಿ, ರಹೀಂ ನೆತ್ರಕೆರೆ, ಹಾರಿಸ್ ಸೇರಾಜೆ, ಸಾಲಿಹ್ ನೆತ್ರಕೆರೆ, ಹಾರಿಸ್ ನೆತ್ರೆಕೆರೆ ಹಸೈನಾರ್ ಸೇರಾಜೆ, ಹನೀಫ್, ಹಮೀದ್ ಸೇರಾಜೆ, ಇಸಾಕ್ ವಿಟ್ಲ , ಕಬೀರ್ ಸೆರಂತಿಮಠ, ಮಹಮೂದ್ ಗಂಡಿ ಮುಂತಾದವರು ಉಪಸ್ಥಿತರಿದ್ದರು. ಅಬ್ದುಲ್ ಹಮೀದ್ ಮುಸ್ಲಿಯಾರ್ ಕಾರ್ಯಕ್ರಮ ನಿರೂಪಿಸಿದರು.





