December 19, 2025

ಚಿಪ್ ವಿನ್ಯಾಸದಲ್ಲಿ ಕ್ಯಾಡೆನ್ಸ್ ಬಳಕೆ: ಪಿ ಎ ಕಾಲೇಜಿನಲ್ಲಿ ಅಟಲ್‌ ಅಧ್ಯಾಪಕರ ಅಭಿವೃದ್ಧಿ ಕಾರ್ಯಕ್ರಮ

0
IMG-20241001-WA0002.jpg

ಮಂಗಳೂರು: ಪಿ.ಎ ಕಾಲೇಜ್ ಆಫ್ ಇಂಜಿನಿಯರಿಂಗ್ ಮಂಗಳೂರು ಇದರ ಎಲೆಕ್ಟ್ರಾನಿಕ್ಸ್ ಮತ್ತು ಸಂವಹನ ಮಾಧ್ಯಮ ವಿಭಾಗದ ಅಡಿಯಲ್ಲಿ ಆಯೋಜಿಸಲಾದ ಅಖಿಲ ಭಾರತ ತಾಂತ್ರಿಕ ಶಿಕ್ಷಣ ಪ್ರಾಯೋಜಿತ ಕ್ಯಾಡೆನ್ಸ್ ಸಾಧನ ಬಳಸಿಕೊಂಡು ಚಿಪ್ ವಿನ್ಯಾಸ’ ಎಂಬ ವಿಷಯ ಆಧಾರಿತ ಅಟಲ್‌ ಅಧ್ಯಾಪಕರ ಅಭಿವೃದ್ಧಿ ಕಾರ್ಯಕ್ರಮದ ಉದ್ಘಾಟನೆ ಪಿ.ಎ ಕಾಲೇಜ್ ಸಭಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮದ ಉದ್ಘಾಟಕರಾಗಿ ಆಗಮಿಸಿದ ವಿ.ಎಲ್. ಎಸ್. ಐ ಕ್ರೇನ್ಸ್ ವರ್ಸಿಟಿ, ಬೆಂಗಳೂರು ಇದರ ತಂತ್ರಜ್ಞಾನ ಮುಖ್ಯಸ್ಧ, ಎಂ. ಆರ್ ಮೊಹ್ಸಿನ್ ಮಾತನಾಡಿ ಭಾರತದಲ್ಲಿ ತಯಾರಿಕಾ ಮಾದರಿ ಪ್ರಯೋಗಾಲಯವನ್ನು ಸ್ಥಾಪಿಸಿದ ನಂತರ ಉದ್ಯೋಗವು ಏರಿಕೆಯಾಗುವುದು ಎಂದು ಹೇಳಿದರು. ಕ್ಯಾಡೆನ್ಸ್ ಬಳಕೆಯ ಜ್ಞಾನ ಎಲೆಕ್ಟ್ರಾನಿಕ್ಸ್ ಮತ್ತು ಸಂವಹನ ಇಂಜಿನಿಯರ್ ಗಳ ಬೇಡಿಕೆ ಹೆಚ್ಚಿಸುತ್ತದೆ ಎಂದು ತಿಳಿಸಿದರು.

ಪಿ.ಎ ಕಾಲೇಜ್ ಆಫ್ ಇಂಜಿನಿಯರಿಂಗ್‌ನ ಪ್ರಾಂಶುಪಾಲರಾದ ಡಾ.ರಮಿಸ್ ಅಧ್ಯಕ್ಷತೆ ವಹಿಸಿದ್ದರು. ಅವರು ಭಾರತದಲ್ಲಿ ಚಿಪ್ ವಿನ್ಯಾಸದ ಪ್ರಾಮುಖ್ಯತೆಯನ್ನು ಅದರ ಉದಯೋನ್ಮುಖ ಪ್ರವೃತ್ತಿಯೊಂದಿಗೆ ಎತ್ತಿ ತೋರಿಸಿದರು. ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ವಿದ್ಯಾರ್ಥಿ ವ್ಯವಹಾರಗಳ ಡೀನ್ ಡಾ ಸಯ್ಯದ್ ಅಮೀನ್ ಅಹಮದ್ ಅವರು ವ್ಯಾಪಾರ ದೃಷ್ಟಿಕೋನದಲ್ಲಿ ಚಿಪ್‌ನ ಪ್ರಾಮುಖ್ಯತೆಯನ್ನು ಎತ್ತಿ ತೋರಿಸಿದರು. ಉಪ ಪ್ರಾಂಶುಪಾಲರಾದ ಡಾ.ಶರ್ಮಿಳಾ ಕುಮಾರಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ವಿಭಾಗದ ಮುಖ್ಯಸ್ಥ ಡಾ ಆಸಿಫ್ ಮತ್ತು ಇತರ ಪ್ರಾಧ್ಯಾಪಕರು ಉಪಸ್ಥಿತರಿದ್ದರು.
ಡಾ. ಆಸಿಯಾ ಹಜರೀನಾ ಮತ್ತು ಡಾ. ಮೊಹಮ್ಮದ್ ಝಾಕಿರ್ ಈ ಕಾರ್ಯಕ್ರಮದ ಸಂಯೋಜಕರಾಗಿದ್ದರು. ವಿದ್ಯಾರ್ಥಿನಿ ಹಲೀಮಾತ್ ಬುಶೈರಾ ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *

You may have missed

error: Content is protected !!