ಕಲ್ಲಡ್ಕ: ಮುಹಿಯುದ್ದೀನ್ ಜುಮ್ಮಾ ಮಸೀದಿ ಅಧ್ಯಕ್ಷರಾಗಿ ಅಬ್ದುಲ್ಲಾ ಹಾಜಿ, ಕಾರ್ಯದರ್ಶಿಯಾಗಿ ಅಬೂಬಕ್ಕರ್ ಸಿದ್ದೀಕ್ ಆಯ್ಕೆ

ಬಂಟ್ವಾಳ: ಮುಹಿಯುದ್ದೀಬ್ ಜುಮ್ಮಾ ಮಸೀದಿ, ಕಲ್ಲಡ್ಕ ಇದರ ಮಹಾ ಸಭೆಯು ಹಾಜಿ ಅಬೂಬಕ್ಕರ್ ಹಜಾಜ್ ಇವರ ಅಧ್ಯಕ್ಷತೆಯಲ್ಲಿ ಮುನೀರುಲ್ ಇಸ್ಲಾಂ ಮದ್ರಸ ಹಾಲ್ ನಲ್ಲಿ ನಡೆಯಿತು. ಖತೀಬರಾದ ಕೆ.ಎಸ್ ಉಸ್ಮಾನ್ ದಾರಿಮಿ ರವರು ದುಆಶಿರ್ವಚನಗೈದರು. ವಾರ್ಷಿಕ ವರದಿ ಮಂಡನೆಯನ್ನು ಕಾರ್ಯದರ್ಶಿಗಳಾದ ಹಾಜಿ ಅಬೂಬಕ್ಕರ್ ಸಾಹಿಬ್ ರವರು ನಡೆಸಿದರು.
ಬಳಿಕ ಮುಂದಿನ ಅವಧಿಗೆ ನೂತನ ಸಮಿತಿಯನ್ನು ರಚಿಸಲಾಯಿತು. ಅಧ್ಯಕ್ಷರಾಗಿ ಅಬ್ದುಲ್ಲಾ ಹಾಜಿ ಕೋಡಿ, ಕಾರ್ಯದರ್ಶಿಗಳಾಗಿ ಅಬೂಬಕ್ಕರ್ ಸಿದ್ದೀಖ್ ಪನಾಮಾ, ಉಪಾಧ್ಯಕ್ಷರಾಗಿ ಅಬೂಬಕ್ಕರ್ ಮುರಬೈಲ್, ಜೊತೆ ಕಾರ್ಯದರ್ಶಿಗಳಾಗಿ ಸಾದಿಕ್ ಕಲ್ಲಡ್ಕ, ಕೋಶಾಧಿಕಾರಿಗಳಾಗಿ ಜವಾಝ್ ಜೆ.ಕೆ ಹಾಗೂ ಸಮಿತಿ ಸದಸ್ಯರುಗಳಾಗಿ ಲತೀಫ್ ಕೆ.ಸಿ ರೋಡ್, ದಾವುದ್ ಮಾಣಿಮಜಲು, ಝಕರಿಯಾ ಗೋಳ್ತಮಜಲು, ಇಬ್ರಾಹಿಂ ಸರಪಾಡಿ, ಕಾಸಿಂ ಕೆ.ಸಿ ರೋಡ್, ಫವಾಜ್ ಕೆ.ಸಿ ರೋಡ್ ಆಯ್ಕೆಗೊಂಡರು. ನಿರ್ಗಮಿತ ಸದಸ್ಯರಾದ ಆಬ್ದುಲ್ ಹಮೀದ್ ಗೋಳ್ತಮಜಲು ನಿರೂಪಿಸಿದರು.