February 4, 2026

ವಿಟ್ಲ: ಪ್ರವಾದಿ ಮುಹಮ್ಮದ್ ಪೈಗಂಬರ್ ಅವರ ಜನ್ಮದಿನ ಪ್ರಯುಕ್ತ ಎಸ್ ಕೆ ಎಸ್ ಎಸ್ ಎಫ್ ವತಿಯಿಂದ ಮದೀನಾ ಪ್ಯಾಶನ್ ಕಾರ್ಯಕ್ರಮ

0
IMG-20240923-WA0005.jpg

ವಿಟ್ಲ: ಪ್ರವಾದಿ ಮುಹಮ್ಮದ್ ಪೈಗಂಬರ್ ಅವರ ಜನ್ಮದಿನ ಪ್ರಯುಕ್ತ ಪ್ರತೀ ವರ್ಷ ಎಸ್ ಕೆ ಎಸ್ ಎಸ್ ಎಫ್ ದಕ್ಷಿಣ ಕನ್ನಡ ಜಿಲ್ಲಾ ವೆಸ್ಟ್ ಸಮಿತಿ ಹಮ್ಮಿಕೊಳ್ಳುವ ಮದೀನಾ ಪ್ಯಾಶನ್ ಕಾರ್ಯಕ್ರಮ ಈ ವರ್ಷ ಎಸ್ ಕೆ ಎಸ್ ಎಸ್ ಎಫ್ ವಿಟ್ಲ ವಲಯದ ಸಹಕಾರದೊಂದಿಗೆ ಸೆಪ್ಟಂಬರ್ 25 ರಂದು ಜೆ ಎಲ್ ಆಡಿಟೋರಿಯಂನಲ್ಲಿ ನಡೆಯಲಿದೆ ಎಂದು ಎಸ್ ಕೆ ಎಸ್ ಎಸ್ ಎಫ್ ದಕ್ಷಿಣ ಕನ್ನಡ ಜಿಲ್ಲಾ ವೆಸ್ಟ್ ಪ್ರಧಾನ ಕಾರ್ಯದರ್ಶಿ ಅಬೂಸ್ವಾಲಿಹ್ ಫೈಝಿ ಅಕ್ಕರಂಗಡಿ ತಿಳಿಸಿದರು.

ಅವರು ಸೋಮವಾರ ವಿಟ್ಲದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಕಾರ್ಯಕ್ರಮದ ವಿವರ ನೀಡಿದರು.

ಅಂದು ಅಸರ್ ನಮಾಝ್ ಬಳಿಕ ವಿಟ್ಲ ಕೇಂದ್ರ ಜುಮಾ ಮಸೀದಿಯ ಮಖಾಮ್ ಝಿಯಾರತ್ ಗೆ ಕುಕ್ಕಾಜೆ ಹುಸೈನ್ ಬಾಅಲವಿ ತಂಙಳ್ ನೇತೃತ್ವ ನೀಡಲಿದ್ದಾರೆ. ಮೌಲಿದ್ ಮಜ್ಲಿಸಿಗೆ ಸಯ್ಯಿದ್ ಬಾತಿಷ್ ತಂಲ್ ಅಲ್ ಬುಖಾರಿ ಕಿನ್ಯ, ಬುರ್ದಾ ಮಜ್ಲಿಸಿಗೆ ನಂದಾವರ ದರ್ಸ್ ವಿದ್ಯಾರ್ಥಿಗಳು ನೇತೃತ್ವ ನೀಡಲಿದ್ದಾರೆ.

ಪ್ರವಾದಿ ಪ್ರೇಮ ಎಂಬ ಪ್ರಮೇಯದಲ್ಲಿ ಅಂತಾರಾಷ್ಟ್ರೀಯ ಖ್ಯಾತಿಯ ವಾಗ್ಮಿ ಶಮೀರ್ ದಾರಿಮಿ ಕೊಲ್ಲಂ ಮುಖ್ಯ ಪ್ರಭಾಷಣ ಮಾಡಲಿದ್ದಾರೆ. ಸಯ್ಯಿದ್ ಅಮೀರ್ ತಂಙಳ್ ಅಧ್ಯಕ್ಷತೆ ವಹಿಸಲಿದ್ದಾರೆ. ಮಹಿಳೆಯರಿಗೆ ಸ್ಥಳ ಸೌಕರ್ಯ ಏರ್ಪಡಿಸಲಾಗಿದೆ.

ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಉಪಾಧ್ಯಕ್ಷ ಹಕೀಮ್ ಪರ್ತಿಪ್ಪಾಡಿ, ವಿಟ್ಲ ವಲಯ ಅಧ್ಯಕ್ಷ ಅಶ್ರಫ್ ಕುಂಡಡ್ಕ, ಪ್ರಧಾನ ಕಾರ್ಯದರ್ಶಿ ಉಮರ್ ದಾರಿಮಿ ಪರ್ತಿಪ್ಪಾಡಿ, ಕೋಶಾಧಿಕಾರಿ ಎಂ.ಎಸ್ ಹಮೀದ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

You may have missed

error: Content is protected !!