February 3, 2026

ಉಪ್ಪಿನಂಗಡಿ: ವಾಲಿಬಾಲ್ ಪಂದ್ಯಾಟಕ್ಕೆ ತೆರಳಿದ್ದ ವಿದ್ಯಾರ್ಥಿ ನಾಪತ್ತೆ

0
image_editor_output_image1451085768-1727095895775.jpg

ಉಪ್ಪಿನಂಗಡಿ: ಇಲ್ಲಿನ ಠಾಣಾ ವ್ಯಾಪ್ತಿಯ ನೆಲ್ಯಾಡಿಯ ವಿವಿ ಕಾಲೇಜಿನಲ್ಲಿ ಪ್ರಥಮ ಬಿ ಎ ವಿದ್ಯಾರ್ಥಿಯಾಗಿರುವ ಹತ್ಯಡ್ಕ ಗ್ರಾಮದ ನಿವಾಸಿ ಎಂ ವಿಜಯಚಂದ್ರ ಎಂಬವರ ಮಗ 18 ವರ್ಷ ಪ್ರಾಯದ ತೀರ್ಥೇಶ ಎಂ ಎಂಬವರು ಸೆ.21ರ ಶನಿವಾರದಿಂದ ನಾಪತ್ತೆಯಾಗಿರುವ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶನಿವಾರದಂದು ಮುಂಜಾನೆ ಮನೆಯಿಂದ ಕಾಲೇಜಿಗೆಂದು ಹೊರಟ ತೀರ್ಥೇಶ ಕಾಲೇಜಿನಲ್ಲಿ ವಾಲಿಬಾಲ್ ಪಂದ್ಯಾಟವಿದೆ ಎಂಬ ಕಾರಣ ನೀಡಿ ಬಟ್ಟೆ ಬರೆಗಳನ್ನು ಕೊಂಡೊಯ್ದಿದ್ದನೆಂದೂ, ಶನಿವಾರ ಸಾಯಂಕಾಲ ನೆಲ್ಯಾಡಿ ಪೇಟೆಯಲ್ಲಿ ಬಸ್ಸಿಗಾಗಿ ಕಾಯುತ್ತಿದ್ದುದ್ದನ್ನು ಸಹಪಾಠಿಗಳು ಕಂಡಿರುವುದಾಗಿಯೂ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.

ಉಪ್ಪಿನಂಗಡಿ ಪೊಲೀಸರು ಪ್ರಕರಣವನ್ನು ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!