ವಿಟ್ಲ: ಗಾಂಧಿನಗರ ಮದರಸ ಮಿಲಾದ್ ಕಾರ್ಯಕ್ರಮ
ವಿಟ್ಲ: ಗಾಂಧಿನಗರ ಮಸ್ಜಿದುಲ್ ಬದ್ರಿಯಾ ಅಧೀನದ ಹಿದಾಯತುಲ್ ಇಸ್ಲಾಂ ಮದರಸದಲ್ಲಿ ಮಿಲಾದ್ ಫೆಸ್ಟ್ ಅಧ್ಯಕ್ಷ ಮುನೀರ್ ಗಮಿ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.
ಯು.ಟಿ.ಇಫ್ತಿಕಾರ್ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ವಿಟ್ಲ ಕೇಂದ್ರ ಜುಮಾ ಮಸೀದಿ ಖತೀಬ್ ದಾವೂದ್ ಹನೀಫಿ ಈದ್ ಮಿಲಾದ್ ಸಂದೇಶ ನೀಡಿದರು. ಕಾರ್ಯದರ್ಶಿ ಇಸ್ಮಾಯಿಲ್ ಶಾಫಿ, ಮುಅದ್ಸಿನ್ ಹಾಜಿ ಹಕೀಂ ಅರ್ಷದಿ, ಮನ್ಸೂರ್ ಖಾದರ್ ಹಾನೆಸ್ಟ್, ಅಬ್ದುಲ್ ರಹಿಮಾನ್ ಮುಸ್ಲಿಯಾರ್, ಅಬೂಬಕರ್ ಮುಸ್ಲಿಯಾರ್ ಮುಂತಾದವರು ವೇದಿಕೆಯಲ್ಲಿದ್ದರು.
ಮದರಸ ವಿದ್ಯಾರ್ಥಿಗಳಿಂದ ವಿವಿಧ ಸ್ಪರ್ಧೆಗಳು ನಡೆದುವು. ಈ ಸಂದರ್ಭ ಲೇಖಕ ಅಬೂಬಕರ್ ಅನಿಲಕಟ್ಟೆ, ಮರ್ಝೂಖ್ ಮೊಯ್ದೀನ್ ಹಾನೆಸ್ಟ್, ಮುನೀರ್ ಗಮಿ, ಶಾಕಿರ್ ಅಹಮದ್, ಇರ್ಶಾದ್ ವಿ.ಎಂ.ಇವರನ್ನು ಸನ್ಮಾನಿಸಲಾಯಿತು.
ಸದರ್ ಮುಅಲ್ಲಿಂ ಖಾಸಿಂ ಸಅದಿ ಸ್ವಾಗತಿಸಿದರು.
ಜಿ.ಎನ್ ಇಸ್ಮಾಯಿಲ್ ವಂದಿಸಿದರು. ಮುಸ್ತಫಾ ವಿಟ್ಲ ನಿರೂಪಿಸಿದರು.




