November 14, 2024

ತಾಯಿಫ್ ಫೈಟರ್ಸ್ ಸ್ಪೋರ್ಟ್ಸ್ ಕ್ಲಬ್ ಕ್ರಿಕೆಟ್ ಪಂದ್ಯಾಟ: ‘YOUNG FRIENDS TAIF’ ಚಾಂಪಿಯನ್

0

ತಾಯಿಫ್: ತಾಯಿಫ್ ಫೈಟರ್ಸ್ ಸ್ಪೋರ್ಟ್ಸ್ ಕ್ಲಬ್ (ತಾಯಿಫ್ ಸೌದಿ ಅರೇಬಿಯಾ)‌ ಇದರ ಆಶ್ರಯದಲ್ಲಿ ನಡೆದ ತಾಯಿಫ್ ನ ಇತಿಹಾಸದಲ್ಲೇ ಎರಡನೇ ಬಾರಿಗೆ ಅಂಡರ್ ಆರ್ಮ್ ಮಾದರಿಯ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾಕೂಟವು ತಾಯಿಫ್ ‘ನಲ್ಲಿ ನಡೆಯಿತು.

ಸೆಪ್ಟೆಂಬರ್ 19ರ ಗುರುವಾರ ರಾತ್ರಿ ಮಾಜಿ ನಾಯಕ ಸಲೀಂ ಪಲ್ಲಕುಡಲ್, ಲತೀಫ್ ಗುರುಪುರ, ಫವಾಝ್ ಬಾಯಾರ್ ಹಾಗೂ ಸಂಘದ ಇತರ ಸದಸ್ಯರ ಉಪಸ್ಥಿತಿಯಲ್ಲಿ ಸದ್ರಿ ಸಂಘದ ಅಧ್ಯಕ್ಷರಾದ ಮನ್ಸೂರ್ ಗುರುಪುರ, ನಾಯಕರಾದ ಸಲೀಂ ಸೂರಿಂಜೆ ಪಂದ್ಯಾಟವನ್ನು ಅಧಿಕೃತವಾಗಿ ಉದ್ಘಾಟನೆ ಮಾಡಿದರು.

ಬಹಳ ರೋಚಕ, ರೋಮಾಂಚಕಾರಿಯಾಗಿ ಸಾಗಿದ
ಪಂದ್ಯಾಕೂಟದಲ್ಲಿ ಸಲೀಂ ಪಲ್ಲಕುಡಲ್ ನಾಯಕತ್ವದ Black Cat Taif, ಸರಫ್ ನೀರ್ ಮಾರ್ಗ ‌ನಾಯಕತ್ವದ Friends Taif, ರಝಾಕ್ ಕೊಡಂಗಾಯಿ ನೇತೃತ್ವದ Kings Taif, ಅಚ್ಚು ಬಂದಿಯೂಡ್ ನಾಯಕತ್ವದ Turf Tigers
ಮತ್ತು ರಮೀಝ್ ಕೊಡಂಗಾಯಿ ನಾಯಕತ್ವದ Young Friends ಹಾಗೂ ಸಿರಾಜ್ ಕಿನಾರೆ ನಾಯಕತ್ವದ H4 Guys ತಂಡಗಳು ಭಾಗವಹಿಸಿದ್ದವು.

ಫೈನಲ್ ಪಂದ್ಯದಲ್ಲಿ ಮಾರಕ ಬೌಲಿಂಗ್ ದಾಳಿ ಸಂಘಟಿಸಿ YOUNG FRIENDS TAIF ಎದುರಾಳಿಯನ್ನು ಸೋಲಿಸುವ ಮೂಲಕ ಹೊನಲು ಬೆಳಕಿನ ಪಂದ್ಯಾಟದಲ್ಲಿ ಚಾಂಪಿಯನ್ಸ್ ಪಟ್ಟ ಅಲಂಕರಿಸಿ ಇತಿಹಾಸ ಬರೆದರೆ, TURF TIGERS ರನ್ನರ್ ಪ್ರಶಸ್ತಿ ಗೆ ತೃಪ್ತಿ ಪಟ್ಟಿತು.

Leave a Reply

Your email address will not be published. Required fields are marked *

error: Content is protected !!