ವಿಟ್ಲ ಗ್ರಾಮೀಣ ಸಹಕಾರಿ ಬ್ಯಾಂಕ್ ಮಹಾಸಭೆ: 2,97,28,008.02 ಕೋಟಿ ರೂ. ಲಾಭ: ಜಗನ್ನಾಥ ಸಾಲಿಯಾನ್
ವಿಟ್ಲ ಗ್ರಾಮೀಣ ಸಹಕಾರಿ ಬ್ಯಾಂಕ್ 2023-24ನೇ ಸಾಲಿನಲ್ಲಿ 690.20 ಕೋಟಿ ರೂ.ಗಳ ವ್ಯವಹಾರ ನಡೆಸಿ, 2,97,28,008.02 ಕೋಟಿ ರೂ.ಗಳ ನಿವ್ವಳ ಲಾಭ ಗಳಿಸಿದೆ. ಸದಸ್ಯರಿಗೆ ಶೇಕಡಾ ಡಿವಿಡೆಂಡ್ ನೀಡಲಾಗಿದೆ ಎಂದು ಬ್ಯಾಂಕ್ ನ ಅಧ್ಯಕ್ಷ ಎಚ್. ಜಗನ್ನಾಥ ಸಾಲಿಯಾನ್ ತಿಳಿಸಿದರು.
ಸೆ. 18ರ ಬುಧವಾರ ನಡೆದ ಬ್ಯಾಂಕಿನ 69ನೇ ವಾರ್ಷಿಕ ಮಹಾಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕಳೆದ ಹಲವು ವರ್ಷಗಳಿಂದ ಸತತವಾಗಿ ಎ ತರಗತಿಯಲ್ಲಿ ಸಂಘ ಮುನ್ನಡೆಯುತ್ತಿದೆ. ಸಂಘಕ್ಕೆ ಸತತ ಮೂರನೇ ಬಾರಿ ಸಾಧನಾ ಪ್ರಶಸ್ತಿ ಲಭ್ಯವಾಗಿದೆ ಎಂದು ತಿಳಿಸಿದರು.
ಕಲ್ಲಡ್ಕ ಶಾಖೆಯ ನೂತನ ಕಚೇರಿ ಕಟ್ಟಡ ಮುಕ್ತಾಯ ಹಂತದಲ್ಲಿದ್ದು, ಶೀಘ್ರ ಉದ್ಘಾಟನೆಗೊಳ್ಳಲಿದೆ. ಉಪ್ಪಿನಂಗಡಿಯಲ್ಲಿ ಶಾಖೆ ಆರಂಭಿಸಲು ಸ್ಥಳ ಪರಿಶೀಲನೆ ನಡೆಸಲಾಗುತ್ತಿದೆ ಎಂದರು.
ಉಪಾಧ್ಯಕ್ಷ ಕೆ. ಎಸ್. ಮೋಹನ ಉರಿಮಜಲು, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ. ಕೃಷ್ಣ ಮುರಳಿ ಶ್ಯಾಮ್,
ನಿರ್ದೇಶಕರಾದ
ಎಂ. ಹರೀಶ ನಾಯಕ್ ವಿಟ್ಲ ,ಮನೋರಂಜನ್ ಕೆ ಆರ್ , ವಿಶ್ವನಾಥ ಎಂ. ವೀರಕಂಬ, ಉದಯ ಕುಮಾರ್ ಆಲಂಗಾರು, ಬಾಲಕೃಷ್ಣ ಪಿ. ಎಸ್. , ಗೋವರ್ಧನ ಕುಮಾರ್ ಐ. ದಯಾನಂದ ಆಳ್ವ ಕಡಂಬು, ಡಿ. ಸುಂದರ ಕನ್ಯಾನ, ದಿವಾಕರ ವಿಟ್ಲ, ಜಯಂತಿ ಎಚ್. ರಾವ್, ಶುಭಲಕ್ಷ್ಮೀ ವಿಟ್ಲ ಉಪಸ್ಥಿತರಿದ್ದರು.
ಬಿ. ಸಿ. ರೋಡ್ ಶಾಖಾಧಿಕಾರಿ ಶ್ರೀನಿಧಿ ವಿ.ಕುಡ್ವ ಪ್ರಾರ್ಥನೆ ಹಾಡಿದರು.
ಹಿರಿಯ ಸದಸ್ಯರಾದ ನೀಲಪ್ಪ ಗೌಡ , ಗೌರಮ್ಮ ದೀಪ ಬೆಳಗಿಸಿದರು. ಬ್ಯಾಂಕಿನ ಸ್ಥಾಪಕಾಧ್ಯಕ ಉರಿಮಜಲು ವೆಂಕಪ್ಪಯ್ಯ ಮತ್ತು ಇತ್ತೀಚೆಗೆ ನಿಧನರಾದ ಮಾಜಿ ಅಧ್ಯಕ್ಷ ಎಲ್. ಎನ್ . ಕುಡೂರು ಅವರ ಭಾವಚಿತ್ರಗಳಿಗೆ ಹಾರಾರ್ಪಣೆ ಮಾಡಿ ಪುಷ್ಪ ನಮನ ಸಲ್ಲಿಸಿದರು.
ಆಡಳಿತ ಮಂಡಳಿ ಅಧ್ಯಕ್ಷ ಜಗನ್ನಾಥ ಸಾಲಿಯಾನ್ ಸ್ವಾಗತಿಸಿದರು. ನಿರ್ದೇಶಕ
ಗೋವರ್ಧನ ಕುಮಾರ್ ಹಿಂದಿನ ಮಹಾಸಭೆಯ ನಡವಳಿಕೆಗಳನ್ನು ವಾಚಿಸಿದರು.
ಮುಖ್ಯ ಕಾರ್ಯನಿರ್ವಹಣಾಧಿಕಾರಿ
ಕೃಷ್ಣ ಮುರಳಿ ಶ್ಯಾಮ್ ಕೆ. ವರದಿ ವಾಚಿಸಿ ಲೆಕ್ಕಪತ್ರ ಮಂಡಿಸಿದರು.
ಉಪಾಧ್ಯಕ್ಷ ಕೆ. ಎಸ್. ಮೋಹನ ಉರಿಮಜಲು ವಂದಿಸಿದರು. ಸಿಬಂದಿ ಎಸ್. ಮಹೇಶ್ ಕುಮಾರ್
ಕಾರ್ಯಕ್ರಮ ನಿರೂಪಿಸಿದರು.





