March 23, 2026

ಸುರತ್ಕಲ್: ಕಾಟಿಪಳ್ಳ 3ನೆ ಬ್ಲಾಕ್ನ ಬದ್ರಿಯಾ ಜುಮಾ ಮಸೀದಿಗೆ ದುಷ್ಕರ್ಮಿಗಳಿಂದ ಕಲ್ಲು ತೂರಾಟ

0
image_editor_output_image779464443-1726424534976.jpg

ಸುರತ್ಕಲ್: ಕಾಟಿಪಳ್ಳ 3ನೆ ಬ್ಲಾಕ್ ನಲ್ಲಿರುವ ಬದ್ರಿಯಾ ಜುಮಾ ಮಸೀದಿಗೆ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ ಘಟನೆ ರವಿವಾರ ರಾತ್ರಿ 11ರ ಸುಮಾರಿಗೆ ನಡೆದಿದೆ.

ಎರಡು ಬೈಕ್ ಗಳಲ್ಲಿ ಬಂದ ನಾಲ್ಕು ಮಂದಿ ದುಷ್ಕರ್ಮಿಗಳು ಮಸೀದಿಗೆ ಕಲ್ಲು ತೂರಾಟ ನಡೆಸಿರುವುದಾಗಿ ತಿಳಿದುಬಂದಿದೆ.

ಸುರತ್ಕಲ್ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು, ಮಸೀದಿಯ ಸಿಸಿಟಿವಿ ಸೇರಿದಂತೆ ಸಮೀಪದ ಸಿಸಿಟಿವಿ ಫೂಟೇಜ್ ವಶಕ್ಕೆ ಪಡೆದುಕೊಂಡು ತನಿಖೆ ನಡೆಸುತ್ತಿದ್ದಾರೆ.

Leave a Reply

Your email address will not be published. Required fields are marked *

error: Content is protected !!