ಜನರಲ್ ಸೆಲ್‌ಗೆ ಸ್ಥಳಾಂತರಿಸುವಂತೆ ನರಹಂತಕ ಪ್ರವೀಣ್ ಚೌಗಲೆ ಪಟ್ಟು: ಜೈಲ್ ನಲ್ಲಿ ಊಟ, ನೀರು ನಿರಾಕರಿಸಿ ಉಪವಾಸ ಕೂತ ಆರೋಪಿ
ಉಡುಪಿ: ಉಡುಪಿ ನೇಜಾರಿನಲ್ಲಿ ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣದ ಆರೋಪಿ ಪ್ರವೀಣ್ ಚೌಗುಲೆ ಅನ್ನ, ನೀರು ಸ್ವೀಕರಿಸಲು ನಿರಾಕರಸಿದ್ದಾನೆ ಎಂದು ವರದಿಯಾಗಿದೆ.
ಬೆಂಗಳೂರು ಸೆಂಟ್ರಲ್ ಜೈಲ್ ನಲ್ಲಿ ಆರೋಪಿ ಪ್ರವೀಣ್ ಉಪವಾಸವಿದ್ದು, ಬೆಳಗಿನ ತಿಂಡಿ ಮಧ್ಯಾಹ್ನ ಊಟ ಮಾಡದೆ ಹಠ ಮಾಡುತ್ತಿದ್ದಾನೆ. ಇಷ್ಟಕ್ಕೂ ಅವನ ಬೇಡಿಕೆ ಏನೆಂದರೆ ತನ್ನನ್ನು ಒಂಟಿ ಸೆಲ್‌ನಿಂದ ಜನರಲ್ ಸೆಲ್‌ಗೆ ಸ್ಥಳಾಂತರಿಸಬೇಕೆನ್ನುವುದು.
ನಿನ್ನೆಯಿಂದ ಆತ ಅನ್ನ, ನೀರು ಸ್ವೀಕರಿಸಲು ನಿರಾಕರಿಸಿ ಉಪವಾಸ ಕುಳಿತಿದ್ದಾನಂತೆ. ಪ್ರವೀಣ್ ಚೌಗುಲೆಯನ್ನು ಭದ್ರತೆಯ ಕಾರಣಕ್ಕಾಗಿ ಬೆಂಗಳೂರಿನ ಪರಪ್ಪನ ಅಗ್ರಹಾರ ಸೆಂಟ್ರಲ್ ಜೈಲಿನಲ್ಲಿಡಲಾಗಿದೆ. ತಿಂಡಿ, ಊಟ ಮಾಡದೆ ಬೇರೆ ಸೆಲ್‌ಗೆ ವರ್ಗಾಯಿಸಲು ಹಠ ಹಿಡಿದಿದ್ದಾನೆ ಎಂಬ ಮಾಹಿತಿ ತಿಳಿದುಬಂದಿದೆ.





