February 3, 2026

ಉಡುಪಿ: ಸ್ನಾನಗೃಹದಲ್ಲಿ ಕುಸಿದು ಬಿದ್ದು ನಿವೃತ್ತ ಶಿಕ್ಷಕಿ ಮೃತ್ಯು

0
image_editor_output_image1969126607-1726204379184.jpg

ಉಡುಪಿ : ಮನೆಯ ಸ್ನಾನಗೃಹದಲ್ಲಿ ಕುಸಿದು ಬಿದ್ದು ನಿವೃತ್ತ ಶಿಕ್ಷಕಿಯೋರ್ವರು ಮೃತಪಟ್ಟ ದಾರುಣ ಘಟನೆ ಉಡುಪಿ ಜಿಲ್ಲೆಯ ನಿಟ್ಟೂರಿನಲ್ಲಿ ಗುರುವಾರ ನಡೆದಿದೆ.

ಹಿರಿಯ ನ್ಯಾಯವಾದಿ ದಿವಂಗತ ವಿಲಿಯಂ ಪಿಂಟೋ ಅವರ ಪತ್ನಿ ರೋಸಿ ವಿಲಿಯಂ ಪಿಂಟೋ(72) ಮೃತ ಶಿಕ್ಷಕಿಯಾಗಿದ್ದಾರೆ. ನಿಟ್ಟೂರು ಶಾಲೆಯ ನಿವೃತ್ತ ಶಿಕ್ಷಕಿಯಾಗಿರುವ ಇವರು ಮನೆಯಲ್ಲಿ ಒಂಟಿಯಾಗಿ ವಾಸ ಮಾಡುತ್ತಿದ್ದರು.

ಮಕ್ಕಳು ಕರೆ ಮಾಡಿದಾಗ ಕರೆ ಎತ್ತದೇ ಇದ್ದರಿಂದ ಮನೆಗೆ ಬಂದು ನೋಡುವಾಗ ರೋಸಿ ಪಿಂಟೋ ಅವರು ಬಾತ್‌ರೂಮಿನಲ್ಲಿ ಕುಸಿದು ಬಿದ್ದು ಮೃತಪಟ್ಟಿರುವುದು ಕಂಡುಬಂದಿದೆ. ಸ್ಥಳಕ್ಕೆ ನಗರ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!