ಪತ್ರಕರ್ತೆ ನಾಝಿಯಾ ಕೌಸರ್ಗೆ ಡಾಕ್ಟರೇಟ್ ಪದವಿ
ಬೆಂಗಳೂರು: ಪತ್ರಕರ್ತೆ ನಾಝಿಯಾ ಕೌಸರ್ ಅವರು ಮಂಡಿಸಿದ ‘ವಕ್ಸ್ ಬೋರ್ಡ್ ಕಾರ್ಯಕ್ರಮಗಳ ಪರಿಣಾಮಕಾರಿ ಅನುಷ್ಠಾನದಲ್ಲಿ ಸಾರ್ವಜನಿಕ ಸಂಪರ್ಕದ ಪಾತ್ರ’ ಎಂಬ ಪ್ರಬಂಧಕ್ಕೆ ಬೆಂಗಳೂರು ವಿಶ್ವವಿದ್ಯಾಲಯ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ.
ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನ ಜ್ಯೋತಿ ಸಭಾಂಗಣದಲ್ಲಿ ನಡೆದ ವಿವಿ ಘಟಿಕೋತ್ಸವದಲ್ಲಿ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಅವರು ಡಾಕ್ಟರೇಟ್ ಪದವಿ ಪ್ರಮಾಣ ಪತ್ರ ಪ್ರದಾನ ಮಾಡಿದರು.
ಪ್ರೊ.ಜಗದೀಶ್ ಪ್ರಕಾಶ್ ಅವರ ಮಾರ್ಗದರ್ಶನದಲ್ಲಿ ನಾಝಿಯಾ ಕೌಸರ್ ಅಧ್ಯಯನವನ್ನು ನಡೆಸಿದ್ದರು.





