ಶಾಲೆಯಲ್ಲಿ ಕುಸಿದು ಬಿದ್ದು 8ನೇ ತರಗತಿಯ ವಿದ್ಯಾರ್ಥಿ ಮೃತ್ಯು
ರಾಯಚೂರು: ಪಟ್ಟಣದ ವಿದ್ಯಾವಾಹಿನಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ 8ನೇ ತರಗತಿ ಓದುತ್ತಿದ್ದ ತಾಲೂಕಿನ ಅತ್ತನೂರು ಗ್ರಾಮದ ವಿದ್ಯಾರ್ಥಿ ತರುಣಕುಮಾರ ತಂದೆ ಮಲ್ಲೇಶ (14) ಶಾಲೆಯಲ್ಲಿ ಲೋ ಬಿಪಿ ಉಂಟಾಗಿ ಮೃತಪಟ್ಟಿರುವ ದುರ್ಘಟನೆ ಜರುಗಿದೆ.
ಶಾಲೆಯಲ್ಲಿ ವಿದ್ಯಾರ್ಥಿ ಕುಸಿದು ಬಿದ್ದಿದ್ದು, ಕೂಡಲೇ ವಿದ್ಯಾರ್ಥಿಯನ್ನು ಶಾಲಾ ಆಡಳಿತ ಮಂಡಳಿ ಪಟ್ಟಣದಲ್ಲಿನ ಖಾಸಗಿ ಆಸ್ಪತ್ರೆಗೆ ಕರೆದೊಯ್ದು ಪ್ರಥಮ ಚಿಕಿತ್ಸೆ ಕೊಡಿಸಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ಸಾಗಿಸುವ ವೇಳೆ ಮಾರ್ಗಮಧ್ಯದಲ್ಲಿ ಬಾಲಕ ಸಾವನ್ನಪ್ಪಿದ್ದಾನೆ ಎಂದು ತಿಳಿದು ಬಂದಿದೆ.ಪೋಷಕರಿಗೆ ಇಬ್ಬರು ಮಕ್ಕಳಿದ್ದು ಮೃತ ಬಾಲಕ ಹಿರಿಯ ಪುತ್ರನೆಂದು ಹೇಳಲಾಗುತ್ತಿದೆ.





