ನೆಲ್ಯಾಡಿ: ಓವರ್ ಟೆಕ್ ಮಾಡಿ ಕಾರುಗಳ ನಡುವೆ ಅಪಘಾತ: ಓರ್ವ ಸಾವು, ಇಬ್ಬರು ಗಂಭೀರ
ನೆಲ್ಯಾಡಿ: ಓವರ್ ಟೆಕ್ ಬರದಲ್ಲಿ ಎರಡು ಕಾರುಗಳ ನಡುವೆ ನಡೆದ ಅಪಘಾತದಲ್ಲಿ ಓರ್ವ ಸಾವನಪ್ಪಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ಸೆಪ್ಟೆಂಬರ್ 9ರಂದು ಸಂಜೆ ಶಿರಾಡಿ ಘಾಟಿಯ ಕೆಂಪುಹೊಳೆ ಬಳಿ ನಡೆದಿದೆ.
ಮೃತರನ್ನು ಹಾಸನದ ನಿವಾಸಿ ಚಂದ್ರೇಗೌಡ (50) ಎಂದು ಗುರುತಿಸಲಾಗಿದೆ. ಅದೇ ಕಾರಿನಲ್ಲಿದ್ದ ಚಿನ್ನೇಗೌಡ (31) ಹಾಗೂ ಶೀಲಾ (40) ಎಂಬವರು ಗಂಭೀರ ಗಾಯಗೊಂಡಿದ್ದು, ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.





