March 21, 2026

BMTC ಬಸ್ ನಲ್ಲಿ ಹಾವು ಪ್ರತ್ಯಕ್ಷ: ಗಾಬರಿಗೊಂಡ ಪ್ರಯಾಣಿಕರು

0
Screenshot_20240908-105033_Dailyhunt.jpg

ಬೆಂಗಳೂರು: ಕೆ.ಆರ್ ಮಾರ್ಕೆಟ್ ನಿಂದ ಕೆ.ಆರ್ ಪುರಂ ಗೆ ಬರ್ತಿದ್ದ ಬಿಎಂಟಿಸಿ ಬಸ್ ಹಿಂಬದಿ ಗ್ಲಾಸ್ ನಲ್ಲಿ ಹಾವೊಂದು ಕಾಣಿಸಿಕೊಂಡಿದ್ದು, ಪ್ರಯಾಣಿಕರು ಆತಂಕಗೊಂಡ ಘಟನೆ ಶುಕ್ರವಾರ ನಡೆದಿದೆ.

ಹಿಂಬದಿ ಗ್ಲಾಸ್ ನಲ್ಲಿ ಹಾವು ಸಿಲುಕಿಕೊಂಡಿರುವುದನ್ನು ಹಿಂಬದಿ ಬರ್ತಿದ್ದ ಕ್ಯಾಂಟರ್ ಚಾಲಕ ಗಮನಿಸಿದ್ದಾರೆ. ಕೂಡಲೇ ಬಸ್ ಚಾಲಕನಿಗೆ ವಿಷ್ಯ ತಿಳಿಸಿದ್ದಾನೆ.

ಇನ್ನು ಚಾಲಕ ಈ ವಿಷಯ ತಿಳಿಯುತ್ತುದ್ದಂತೆ ಬಸ್ ನಿಲ್ಲಿಸಿದ್ದು, ಬಳಿಕ ಗಾಬರಿಗೊಂಡ ಪ್ರಯಾಣಿಕರು ಬಸ್‌ನಿಂದ ಕೆಲಗಡೆ ಇಳಿದಿದ್ದಾರೆ. ನಂತರ ಸಿಲುಕಿದ್ದ ನಾಗರಾಜನನ್ನು ರಕ್ಷಣೆ ಮಾಡಲಾಗಿದೆ. ಮತ್ತೊಂದೆಡೆ ಸದ್ಯ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ತಿಳಿದುಬಂದಿದೆ. ಕೆ.ಆರ್ ಮಾರ್ಕೆಟ್‌ನಿಂದ ಕೆ.ಆರ್ ಪುರಂಗೆ ಸುಮಾರು ಮಧ್ಯಾಹ್ನ 3 ಗಂಟೆ ಸುಮಾರಿಗೆ ಬಸ್‌ ಬಂದಿದ್ದು, ಆಗ ಮತ್ತೆ ಡಿಪೋದಲ್ಲಿ ಬಸ್ ಪರಿಶೀಲಿಸಲಾಗಿದೆ ಎನ್ನಲಾಗುತ್ತಿದೆ.

ಡಿಪೋ 29 ಕೆ.ಆರ್ ಪುರಂ ಮಾರ್ಗದ ಎಲೆಕ್ಟ್ರಿಕಲ್ ಬಸ್ ನಲ್ಲಿ ಈ ಹಾವು ಕಾಣಿಸಿಕೊಂಡಿದ್ದು, ನಿನ್ನೆ ಮಧ್ಯಾಹ್ನ 3 ಘಂಟೆ ಸುಮಾರಿಗೆ ಘಟನೆ ನಡೆದಿದೆ ಎಂದು ವರದಿಗಳು ತಿಳಿಸಿವೆ.

Leave a Reply

Your email address will not be published. Required fields are marked *

You may have missed

error: Content is protected !!