March 21, 2026

ಕರಾವಳಿ ಸುದ್ದಿ ನೂತನ ವೆಬ್ ಸೈಟ್ ಉದ್ಘಾಟನೆ

0
image_editor_output_image935587914-1725779007874

ಬಂಟ್ವಾಳ: ಕರಾವಳಿ ಸುದ್ದಿ ವಾರಪತ್ರಿಕೆಯ ನೂತನ ವೆಬ್ ಸೈಟ್ www.karavalisuddi.com ಸಪ್ಟೆಂಬರ್ 8ರ ಭಾನುವಾರ ಲೋಕಾರ್ಪಣೆಗೊಂಡಿತು. ಸೂರಿಕುಮೇರು ಬೊರಿಮಾರ್ ಸೈಂಟ್ ಜೋಸೆಫ್ ಚರ್ಚ್ ನ ಧರ್ಮಗುರು  ವಂ. ಫಾದರ್ ನವೀನ್ ಪ್ರಕಾಶ್ ಡಿ’ಸೋಜ ನೂತನ ವೆಬ್ ಸೈಟ್ ಅನ್ನು ಉದ್ಘಾಟಿಸಿ ಆಶೀರ್ವಚನ ನೀಡಿದರು.

ಕಥೋಲಿಕ್ ಸಭಾದ ಕೇಂದ್ರೀಯ ಅಧ್ಯಕ್ಷ ಆಲ್ವಿನ್ ಡಿಸೋಜ ಪಾಣೀರ್ ಮಾತನಾಡಿ, ಮಾತೆ ಮೇರಿಯಮ್ಮ ರವರ ಹುಟ್ಟುಹಬ್ಬದ ದಿನದಂದೇ ಕರಾವಳಿ ಸುದ್ದಿ ವಾರಪತ್ರಿಕೆಯ ತಂಡ ನೂತನ ವೆಬ್ ಸೈಟ್ ಆರಂಭಿಸಿರುವುದು ಸಂತೋಷದ ವಿಚಾರ ಎಂದ ಅವರು, ಈ ಮಾಧ್ಯಮ ಸಮಾಜಕ್ಕೆ ಬೆಳಕಾಗಲಿ ಎಂದು ಹಾರೈಸಿದರು.

ಕರಾವಳಿ ಸುದ್ದಿ ವಾರಪತ್ರಿಕೆ ಸಂಪಾದಕ ರೋಷನ್ ಬೊನಿಫಾಸ್ ಮಾರ್ಟಿಸ್ ರವರು ಮಾತನಾಡಿ, ಕರಾವಳಿ ಸುದ್ಧಿ ವಾರಪತ್ರಿಕೆಗೆ ಓದುಗರಿಂದ ಉತ್ತಮ ಸ್ಪಂದನೆ ದೊರಕುತ್ತಿದೆ. ಈ ಪ್ರೇರಣೆಯಿಂದಲೇ ನಮ್ಮ ಬಳಗ ನೂತನ ವೆಬ್ ಸೈಟ್ ಆರಂಭಿಸಿದ್ದು, ಮುಂದಿನ ದಿನಗಳಲ್ಲಿಯೂ ಅರಿವಿನತ್ತ ನಮ್ಮಚಿತ್ತ ಎನ್ನುವ ಘೋಷವಾಕ್ಯದೊಂದಿಗೆ ಮುನ್ನಡೆಯಲಿದೆ ಎಂದರು.

ಚರ್ಚ್ ಪಾಲನಾ ಮಂಡಳಿ ಉಪಾಧ್ಯಕ್ಷ ಸ್ಟೀವನ್ ಪ್ರಕಾಶ್ ಮಾರ್ಟಿಸ್, ಕಾರ್ಯದರ್ಶಿ ಸ್ವೀವನ್ ಆಲ್ವಿನ್ ಪಾಯ್ಸ್ , ಚರ್ಚ್ ಆಯೋಗಗಳ ಸಂಯೋಜಕ ಎಲಿಯಾಸ್ ಪಿರೇರಾ, ಕಥೋಲಿಕ್ ಸಭಾ ಸೂರಿಕುಮೇರು ಬೊರಿಮಾರ್ ಘಟಕದ ಅಧ್ಯಕ್ಷ ತೊಮಸ್ ಲಸ್ರಾದೋ, ಉಪಸಂಪಾದಕಿ ಅನಿತಾ ಮಾರ್ಟಿಸ್ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

You may have missed

error: Content is protected !!