ಇಂಗ್ಲೆಂಡ್ ಆಲ್ ರೌಂಡರ್ ಆಟಗಾರ ಮೊಯಿನ್ ಅಲಿ ಅಂತರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ
ಲಂಡನ್: ಇಂಗ್ಲೆಂಡ್ ತಂಡದ ಸ್ಟಾರ್ ಆಲ್ರೌಂಡರ್ ಮೊಯಿನ್ ಅಲಿ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ದಾರೆ. ಈ ಹಿಂದೆ ಟೆಸ್ಟ್ ಮಾದರಿಗೆ ನಿವೃತ್ತಿ ಘೋಷಿಸಿದ್ದ, ಮೊಯಿನ್ ಇದೀಗ ಏಕದಿನ ಹಾಗೂ ಟಿ20 ಕ್ರಿಕೆಟ್ಗೂ ನಿವೃತ್ತಿ ಘೋಷಿಸಿದ್ದಾರೆ.
“ನನಗೆ 37 ವರ್ಷ ವಯಸ್ಸಾಗಿದೆ. ನಾನು ಈ ತಿಂಗಳ ಆಸ್ಟ್ರೇಲಿಯಾ ಸರಣಿಗೆ ಆಯ್ಕೆಯಾಗಲಿಲ್ಲ” ಎಂದು ಮೊಯಿನ್ ಅಲಿ ಅವರು ಡೈಲಿ ಮೇಲ್‌ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ. “ನಾನು ಇಂಗ್ಲೆಂಡ್‌ಗಾಗಿ ಸಾಕಷ್ಟು ಕ್ರಿಕೆಟ್ ಆಡಿದ್ದೇನೆ. ಇದು ಮುಂದಿನ ಪೀಳಿಗೆಗೆ ಅವಕಾಶ ನೀಡುವ ಸಮಯವಾಗಿದೆ. ಅದನ್ನು ಈಗಾಗಲೇ ನನಗೆ ವಿವರಿಸಲಾಗಿದೆ. ಸಮಯ ಸರಿಯಾಗಿದೆ ಎಂದು ಭಾವಿಸಿ, ನಾನು ನಿವೃತ್ತಿ ಘೋಷಿಸುತ್ತಿದ್ದೇನೆ” ಎಂದು ಅವರು ಭಾರವಾದ ಮಾತುಗಳನ್ನು ಹೊರಹಾಕಿದ್ದಾರೆ.
ಮೊಯಿನ್ ಅವರು 2014 ರಲ್ಲಿ ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ಇಂಗ್ಲೆಂಡ್ ಪರ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದ್ದರು. 10 ವರ್ಷಗಳ ವೃತ್ತಿಜೀವನದಲ್ಲಿ 138 ಏಕದಿನ ಮತ್ತು 92 ಟಿ20 ಪಂದ್ಯಗಳನ್ನು ಆಡಿದ್ದಾರೆ. 2014ರಲ್ಲಿ ಶ್ರೀಲಂಕಾ ಇಂಗ್ಲೆಂಡ್‌ಗೆ ಭೇಟಿ ನೀಡಿದಾಗ, ಮೊಯಿನ್ ಲಾರ್ಡ್ಸ್‌ನಲ್ಲಿ ಟೆಸ್ಟ್‌ಗೆ ಪಾದಾರ್ಪಣೆ ಮಾಡಿದ್ದ ಅವರು 68 ಟೆಸ್ಟ್ ಪಂದ್ಯವಾಡಿದ್ದಾರೆ. ಎಂಟು ಶತಕಗಳು ಮತ್ತು 28 ಅರ್ಧಶತಕಗಳನ್ನು ಸೇರಿದಂತೆ 6678 ರನ್‌ಗಳನ್ನು ಗಳಿಸಿದ್ದಾರೆ. 3 ಸ್ವರೂಪದ ಕ್ರಿಕೆಟ್ ನಲ್ಲಿ 366 ವಿಕೆಟ್‌ಗಳನ್ನು ಮೊಯಿನ್ ಅಲಿ ಗಳಿಸಿದ್ದಾರೆ.